ವಿದೇಶ

ಪಿಎಂ ಅಮೆರಿಕಾ ಪ್ರವಾಸ: ಇರಾನ್ ಅಧ್ಯಕ್ಷ ರೂಹಾನಿಯನ್ನು ಭೇಟಿಯಾದ ಪ್ರಧಾನಿ ಮೋದಿ

Raghavendra Adiga

ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇರಾನ್‌ ಅಧ್ಯಕ್ಷ ಹಸನ್ ರೂಹಾನಿ ಅವರನ್ನು ಭೇಟಿಯಾದರು.ಉಭಯ ನಾಯಕರು ಪ್ರಾದೇಶಿಕ ಹಿತಾಸಕ್ತಿಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎನ್‌ಜಿಎಎಯಲ್ಲಿ ಇರಾನ್ ವಿರುದ್ಧ ಮಂಗಳವಾರ ಮೋದಿ ಸಮ್ಮುಖದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಸಭೆ ನಡೆದಿದೆ.

ಕಳೆದ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಎರಡು ಬಾರಿ ಟ್ರಂಪ್ ಅವರನ್ನು ಭೇಟಿಯಾದ ನಂತರ ಈ ಸಭೆ ನಡೆಯುತ್ತಿದೆ. ಮೊದಲು ಭಾನುವಾರ ಹೂಸ್ಟನ್‌ನಲ್ಲಿ ನಡೆದ 'ಹೌಡಿ, ಮೋದಿ' ಕಾರ್ಯಕ್ರಮದಲ್ಲಿ, ಎರಡನೇ ಬಾರಿ ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಮೋದಿಯವರು ಟ್ರಂಪ್ ಅವರನ್ನು ಭೇಟಿಯಾಗಿದ್ದರು.

ಇನ್ನು ಮೋದಿ ಇದಕ್ಕೆ ಮುನ್ನ ಕಿರ್ಗಿಸ್ತಾನ್‌ನ ಬಿಶ್‌ಕೆಕ್‌ನಲ್ಲಿ ಜೂನ್‌ನಲ್ಲಿ ನಡೆದಿದ್ದ ವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇಂದು ಮುಂಜಾನೆ ಪ್ರಧಾನಿ ಮೋದಿ ತಮ್ಮ ನ್ಯೂಜಿಲ್ಯಾಂಡ್ ಸಹವರ್ತಿ ಜಸಿಂಡಾ ಅರ್ಡೆರ್ನ್ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದು ಭಯೋತ್ಪಾದನೆ ವಿರುದ್ಧ ಹೋರಾಡಲು ಪರಸ್ಪರ ಬೆಂಬಲಕ್ಕೆ ಮನವಿ ಮಾಡಿದ್ದಾರೆ.ಈ ವೇಳೆ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ಕುರಿತಂತೆ ಉಭಯ ನಾಯಕರು ಚರ್ಚಿಸಿದ್ದು  ರಾಜಕೀಯ, ಆರ್ಥಿಕ, ರಕ್ಷಣೆ, , ಭದ್ರತೆ ಮತ್ತು ಜನ ಸಂಪರ್ಕ ತೀವ್ರಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT