ವಿದೇಶ

ಅಮೆರಿಕನ್ನರಿಗೆ 9/11ರ ದಾಳಿಗಿಂತಲೂ ಭೀಕರ ಕೊರೋನಾ ವೈರಸ್!

Sumana Upadhyaya

ವಾಷಿಂಗ್ಟನ್:  ಅಮೆರಿಕಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 4 ಸಾವಿರಕ್ಕೇರಿದೆ. ಈ ಮೃತರ ಸಂಖ್ಯೆ ಅಮೆರಿಕಾದಲ್ಲಿ 9/11ರ ಭಯೋತ್ಪಾದಕ ದಾಳಿಗಿಂತಲೂ ಅಧಿಕವಾಗಿದೆ.

ಸಾಂಕ್ರಾಮಿಕ ರೋಗ ದೇಶದಲ್ಲಿ 1 ಲಕ್ಷದಿಂದ 2 ಲಕ್ಷದವರೆಗೆ ಜನರನ್ನು ಬಲಿಕೊಡಬಹುದು ಎಂದು ಉನ್ನತ ಮಟ್ಟದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ಪ್ರಕಾರ, ಅಮೆರಿಕಾದಲ್ಲಿ 4 ಸಾವಿರಕ್ಕೂ ಅಧಿಕ ಜನರು ಇದುವರೆಗೆ ಮೃತಪಟ್ಟಿದ್ದು ಸುಮಾರು 2 ಲಕ್ಷಕ್ಕೆ ಸಮೀಪ ಜನರಿಗೆ ಕೊರೋನಾ ಸೋಂಕು ತಗುಲಿದೆ.

2001ರಲ್ಲಿ ಅಲ್ ಖೈದಾ ನಡೆಸಿದ ಭಯೋತ್ಪಾದಕ ದಾಳಿಗೆ ಸುಮಾರು 3 ಸಾವಿರ ಮಂದಿ ಅಮೆರಿಕನ್ನರು ಮೃತಪಟ್ಟಿದ್ದರು.

ಚೀನಾದಿಂದ ಮೃತರ ಸಂಖ್ಯೆ ಹೆಚ್ಚಳ:ಚೀನಾದಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ಗೆ ಅಲ್ಲಿ ಬಲಿಯಾದವರ ಸಂಖ್ಯೆ 3,310 ಮಂದಿ. ಜಾಗತಿಕ ಮಟ್ಟದಲ್ಲಿ 8 ಲಕ್ಷದ 60 ಸಾವಿರ ಕೊರೋನಾ ಕೇಸುಗಳು ದೃಢಪಟ್ಟಿದ್ದು 42 ಸಾವಿರಕ್ಕೂ ಅಧಿಕ ಮಂದಿ ವಿಶ್ವದಾದ್ಯಂತ ಮೃತಪಟ್ಟಿದ್ದಾರೆ.

ಚೀನಾದಲ್ಲಿ 82 ಸಾವಿರದ 294 ಕೇಸುಗಳಲ್ಲಿ ಇಂದು ನಾಲ್ಕನೇ ಸ್ಥಾನದಲ್ಲಿದ್ದು ಸ್ಪೈನ್, ಇಟಲಿ ಮತ್ತು ಅಮೆರಿಕಾ ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನೆರಡು ವಾರ ಅಮೆರಿಕಕ್ಕೆ ಭಾರೀ ಸಂಕಷ್ಟವಿದೆ. ಮುಂದಿನ ದಿನಗಳಲ್ಲಿ ಕಷ್ಟದ ಪರಿಸ್ಥಿತಿಗೆ ಸಿದ್ದರಾಗಿರಿ ಎಂದು ಹೇಳಿದ್ದಾರೆ.

SCROLL FOR NEXT