ವಿದೇಶ

ಸೋಂಕಿತರ ಸಂಖ್ಯೆ 10 ಲಕ್ಷ, ಕೊರೋನಾದಿಂದ ಸಾವು 50 ಸಾವಿರಕ್ಕೇರಲಿದೆ: ವಿಶ್ವ ಆರೋಗ್ಯ ಸಂಸ್ಥೆ

Shilpa D

ಜಿನಿವಾ: ಮುಂದಿನ ಕೆಲವು ದಿನಗಳಲ್ಲೇ ಜಾಗತಿಕ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 10 ಲಕ್ಷ  ಹಾಗೂ 50 ಸಾವಿರ ಮಂದಿ ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಹಾಗೂ ಜಾಗತಿಕವಾಗಿ ಸೋಂಕು ವ್ಯಾಪಿಸುತ್ತಿರುವುದು ತೀವ್ರ ಕಳವಳ ಉಂಟು ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. 

'ಕಳೆದ ಐದು ವಾರಗಳಲ್ಲಿ ಸೋಂಕು ದೃಢಪಡುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಏರು ಮುಖವಾಗಿದೆ ಹಾಗೂ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಕಳೆದ ವಾರ ದುಪ್ಪಟ್ಟಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಕೋವಿಡ್‌–19 ದೃಢಪಟ್ಟಿರುವ ಪ್ರಕರಣಗಳು 10 ಲಕ್ಷ ಮುಟ್ಟಲಿವೆ ಹಾಗೂ ಸಾವಿಗೀಡಾಗುವವರ ಸಂಖ್ಯೆ 50,000ಕ್ಕೆ ಏರಿಕೆಯಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಸೋಂಕು ದೃಢಪಟ್ಟ ಪ್ರಕರಣಗಳು 9,39,181 ತಲುಪಿದ್ದು, ಸೋಂಕಿನಿಂದಾಗಿ 47,118 ಮಂದಿ ಸಾವಿಗೀಡಾಗಿದ್ದಾರೆ. ಚಿಕಿತ್ಸೆಯ ಬಳಿಕ ಗುಣಮುಖರಾದವರ ಸಂಖ್ಯೆ 1,90,816 ಆಗಿದೆ. ಚೇತರಿಕೆ ಕಂಡಿರುವವರ ಪ್ರಮಾಣ ಶೇ 20ರಷ್ಟಿದೆ.  

SCROLL FOR NEXT