ವಿದೇಶ

ಅಮೆರಿಕಾ ಅಧ್ಯಕ್ಷರಿಗಿಲ್ಲ ಕೋವಿಡ್ ಸೋಂಕು: ಎರಡನೇ ಬಾರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಂಡ ಡೊನಾಲ್ಡ್ ಟ್ರಂಪ್

Raghavendra Adiga

ವಾಷಿಂಗ್ಟನ್: ಕೊರೋನಾವೈರಸ್ ಹಾವಳೀ ಪ್ರಾರಂಬವಾದಾಗಿನಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಎರಡನೇ ಬಾರಿ ಕೊರೋನಾ ಟೆಸ್ಟ್ ಗೆ ಒಳಗಾಗಿದ್ದು ಎರಡೂ ಬಾರಿ ನೆಗೆಟಿವ್ ವರದಿ ಬಂದಿದೆ.

ನಾನು ಈ ಬೆಳಿಗ್ಗೆ ಕೊರೋನಾ ಟೆಸ್ಟ್ ತೆಗೆದುಕೊಂಡಿದ್ದೇನೆ. ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. "ಅಧ್ಯಕ್ಷರು  ಕೋವಿಡ್ 19 ಮಾರಕ ರೋಗದ ಟೆಸ್ಟ್ ಮಾಡಿಸಿದ್ದು ಅದು ನೆಗೆಟಿವ್(ನಕಾರಾತ್ಮಕ) ವರದಿ ಬಂದಿದೆ." ಅಧ್ಯಕ್ಷರ ಮಾದ್ಯಮ ಪ್ರಕಟಣೆ ಹೇಳಿದೆ.

ಇದು ಟ್ರಂಪ್‌ ಮಾಡಿಸಿಕೊಂಡ ಎರಡನೇ ಪರೀಕ್ಷೆಯಾಗಿದ್ದು ಈ ಸಮಯದಲ್ಲಿ ಅವರು ಹೊಸ ಕ್ಷಿಪ್ರ ವಿಧಾನವನ್ನು ಬಳಸಿದರು, ಅದು ಪೂರ್ಣಗೊಳ್ಳಲು ಒಂದು ನಿಮಿಷ ತೆಗೆದುಕೊಂಡಿತು ಮತ್ತು ಫಲಿತಾಂಶವನ್ನು ಕೇವಲ 15 ನಿಮಿಷಗಳಲ್ಲಿ ಒದಗಿಸಲಾಗಿದೆ.

"ಹೊಸ ವಿಧಾನ ಎಷ್ಟು ಬೇಗನೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಲು  ನಾನು ಅದನ್ನು ಕುತೂಹಲದಿಂದ ತೆಗೆದುಕೊಂಡೆ. ಇದು ತುಂಬಾ ಸುಲಭ. ಮೊದಲಿನ ವಿಧಾನಕ್ಕಿಂತ ಇದು ಹೆಚ್ಚು ಸುಲಭವಾಗಿದೆ" ಟ್ರಂಪ್ ಹೇಳಿದರು.

ಮಾರ್ಚ್ ಮಧ್ಯದಲ್ಲಿ ಮಾಡಿದ ಮೊದಲ ಪರೀಕ್ಷೆಯು ಹೆಚ್ಚು ಕಠಿಣವಾಗಿತ್ತು.ಮತ್ತು ಫಲಿತಾಂಶ ಬರಲಿ ಕೆಲವು ಗಂಟೆಗಳ ಕಾಲ ಹಿಡಿದಿತ್ತು.73 ರ ಹರೆಯದ ಟ್ರಂಪ್ ಈ ಹಿಂದೆ ಪರೀಕ್ಷೆಗೆ ಒಳಗಾಗಲು  ವಿರೋಧಿಸಿದ್ದರು, ಜೊತೆಗೆ ಕೊರೋನಾ  ಸಾಮಾನ್ಯ ಜ್ವರಕ್ಕಿಂತ ಕೆಟ್ಟದ್ದಲ್ಲ ಮತ್ತು ಆರ್ಥಿಕತೆಯ ಭಾರೀ ಸ್ಥಗಿತಗೊಳಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದರು.
 

SCROLL FOR NEXT