ವಿದೇಶ

ಕೊರೋನಾವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಸಿ ಮೋದಿಗೆ ಟ್ರಂಪ್ ದುಂಬಾಲು

Manjula VN

ವಾಷಿಂಗ್ಟನ್: ಕೊರೋನ ಸಮಸ್ಯೆಯಿಂದ ತೀವ್ರವಾಗಿ ಭಾದಿತಗೊಂಡಿರುವ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಕಳಿಯ ಮನವಿ ಮಾಡಿದ್ದಾರೆ.

ಈ ಮಾತ್ರೆ ಕೊವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಿಸುವ ಔಷಧವಾಗಿದೆ. ದೂರವಾಣಿ ಮೂಲಕ ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿರುವ ಟ್ರಂಪ್ ಅವರು, ಅಮೆರಿಕಾದಲ್ಲಿ ಇರುವ ವೈರಸ್ ಸೋಂಕಿತರಿಕೆ ಚಿಕಿತ್ಸೆ ನೀಡುವ ಸಲುವಾಗಿ ಔಷಧ ರಫ್ತು ಮಾಡುವಂಮತೆ ಮೋದಿಯವರ ಬಳಿ ಮನವಿ ಮಾಡಲಾಗಿದೆ ಎಂದು ಸ್ವತಃ ಟ್ರಂಪ್ ಅವರೇ ಹೇಳಿಕೊಂಡಿದ್ದಾರೆ. 

ಕೊರೋನಾ ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹೈಡ್ರೋಕ್ಲೋರೋಕ್ವಿನ್ ಔಷಧಿ ಕುರಿತು ವೈದ್ಯರ ಬಳಿ ಚರ್ಚಿಸಿದ್ದೇನೆಂದು ತಿಳಿಸಿದ್ದಾರೆ. 

ವೈರಸ್ ವಿರುದ್ಧ ಹೋರಾಟಲು ಭಾರತ ಶ್ರಮಿಸುತ್ತಿದೆ. ಕೊಟ್ಯಾಂತರ ಮಂದಿ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಈಗಾಗಲೇ ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ. ಮಲೇರಿಯಾಗೆ ಬಳಸುವ ಹೈಡ್ರೋಕ್ಲೋರೊಕ್ವಿನ್ ಔಷದವನ್ನು ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತಿದೆ. ಭಾರತದ ಬಳಿ ಹೈಡ್ರೋಕ್ಲೋರೊಕ್ವಿನ್ ಔಷಧಿ ದಾಸ್ತಾನು ಸಾಕಷ್ಟಿದೆ. ಇದರಲ್ಲಿ ಅಮೆರಿಕಾಗು ಸ್ವಲ ಔಷಧಿ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆಂದು ತಿಳಿಸಿದ್ದಾರೆ. 

SCROLL FOR NEXT