ವಿದೇಶ

'ಅಮೆರಿಕಾದಿಂದ ಹೆಚ್ಚು ಫಂಡ್, ಆದರೆ ಚೀನಾ ಸ್ನೇಹಿ': ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಟ್ರಂಪ್ ಕೆಂಡಾಮಂಡಲ!

Srinivas Rao BV

ವಾಷಿಂಗ್ ಟನ್: ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚಿನ ಹಣಕಾಸಿನ ನೆರವು ಅಮೆರಿಕಾದಿಂದ ಬೇಕು, ಆದರೆ ಅದು ಚೀನಾದ ಬಗ್ಗೆ ಮೃದು ಧೋರಣೆ ಹೊಂದಿದೆ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. 

 
ಕೊರೋನಾ ವೈರಸ್ ಹರಡುತ್ತಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಅಮೆರಿಕಾಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಿತು ಎಂಬುದು ಟ್ರಂಪ್ ಆಕ್ರೋಶಕ್ಕೆ ಕಾರಣವಾದ ಅಂಶ. 

ನಮ್ಮ ಗಡಿಗಳನ್ನು ಚೀನಾಗೆ ಮುಕ್ತವಾಗಿರಿಸಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆ ಸಲಹೆಯನ್ನು ಅದೃಷ್ಟವಶಾತ್ ನಾನು ತಿರಸ್ಕರಿಸಿದ್ದೆ. ವಿಶ್ವ ಆರೋಗ್ಯ ಸಂಸ್ಥೆ ಇಂತಹ ತಪ್ಪು ಸಲಹೆಯನ್ನೇಕೆ ನೀಡಿತು ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ಅಮೆರಿಕ ತತ್ತರಿಸಿದೆ. ಕೊರೋನಾ ಸೋಂಕು ನಿಯಂತ್ರಿಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳಿಸಿಕೊಡುವಂತೆ ಟ್ರಂಪ್ ಭಾರತಕ್ಕೆ ಕೂಡ ಮನವಿ ಮಾಡಿದ್ದರು.  ಅಮೆರಿಕ ಮನವಿಗೆ ಸ್ಪಂದಿಸಿರುವ ಭಾರತ ಮಾತ್ರೆಗಳನ್ನು ರಫ್ತು ಮಾಡುವುದಾಗಿ ಹೇಳಿದೆ. 

SCROLL FOR NEXT