ವಿದೇಶ

ಕೊರೋನಾ ವೈರಸ್: ಅಮೆರಿಕದಲ್ಲಿ ಒಂದೇ ದಿನ 1800ಕ್ಕೂ ಅಧಿಕ ಸಾವು, 4 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ

Srinivasamurthy VN

ವಾಷಿಂಗ್ಟನ್: ಅಮೆರಿಕದಲ್ಲಿ ಮಂಗಳವಾರ ಒಂದೇ ದಿನ 1,800ಕ್ಕಿಂತಲೂ ಹೆಚ್ಚು ಜನರು ಮಾರಕ ಕೊರೋನಾ ವೈರಸ್ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಮಂಗಳವಾರ ಅಮೆರಿಕದಲ್ಲಿ ಒಂದೇ ದಿನ  1800ಕ್ಕೂ ಅಧಿಕ ಮಂದಿ ಕೊರೋನಾ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಈ ವರೆಗೂ ಅಮೆರಿಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಸಾವಿರ ಗಡಿ ದಾಟಿದೆ ಎಂದು ಜಾನ್ಸ್  ಹಾಪ್ಕಿನ್ಸ್ ಯುನಿವರ್ಸಿಟಿ ವರದಿ ಮಾಡಿದೆ. ಅಲ್ಲದೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಅಮೆರಿಕದಲ್ಲಿ 4 ಲಕ್ಷ ಗಡಿಯತ್ತ ಸಾಗಿದ್ದು, ಈ ವರೆಗೂ ಸುಮಾರು 3 ಲಕ್ಷದ 98 ಸಾವಿರಕ್ಕೂ ಅಧಿಕ ಮಂದಿ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ, ಆ ಮೂಲಕ ಕೊರೋನಾ ವೈರಸ್ ಜಗತ್ತಿನಲ್ಲಿ  ಅತೀ ಹೆಚ್ಚು ಮಂದಿ ತುತ್ತಾಗಿರುವ ರಾಷ್ಟ್ರ ಎಂಬ ಕುಖ್ಯಾತಿ ಅಮೆರಿಕ ಪಾತ್ರವಾಗಿದೆ. 

ಕೊರೋನಾ ವೈರಸ್ ಗೆ ನ್ಯೂಯಾರ್ಕ್‌ನಲ್ಲಿ ಅತೀ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಮಂಗಳವಾರ ಇಲ್ಲಿ ಸಾವಿಗೀಡಾದವರ ಸಂಖ್ಯೆ 731 ಆಗಿದೆ. ಸೋಂಕು ದೃಢಪಟ್ಟವರ ಸಂಖ್ಯೆ ಈಗ ಇಟಲಿಗಿಂತಲೂ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ನ್ಯೂಯಾರ್ಕ್ ಮೇಯರ್ ಜನತೆಯಲ್ಲಿ  ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಜಗತ್ತಿನಾದ್ಯಂತ ಸುಮಾರು 130ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಗೆ 1.4 ದಶಲಕ್ಷ ಮಂದಿ ತುತ್ತಾಗಿದ್ದಾರೆ. 

SCROLL FOR NEXT