ವಿದೇಶ

2 ತಿಂಗಳ ನಂತರ ಚೀನಾದ ವುಹಾನ್ ನಲ್ಲಿ ಪ್ರಯಾಣ ನಿರ್ಬಂಧ ತೆರವು:ರೈಲು ನಿಲ್ದಾಣಕ್ಕೆ ಬಂದ ಸಾವಿರಾರು ಮಂದಿ

Sumana Upadhyaya

ವುಹಾನ್(ಚೀನಾ): ಕೊರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಎರಡು ತಿಂಗಳಿಗೂ ಅಧಿಕ ಸಮಯದಿಂದ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗಿದೆ.

ಇದರಿಂದ ಇಂದು ಬೆಳಗ್ಗೆ ಸಾವಿರಾರು ಮಂದಿ ಪ್ರಯಾಣಿಕರು ಬೇರೆ ಬೇರೆ ಕಡೆ ತೆರಳುತ್ತಿರುವುದು ಕಂಡುಬಂತು.

ಕಳೆದ ಜನವರಿಯಲ್ಲಿ ಇಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡಿದಾಗ ಚೀನಾ ಸರ್ಕಾರ ಇಲ್ಲಿನ ಜನರು ಹೊರಹೋಗುವುದಕ್ಕೆ ಮತ್ತು ಹೊರಗಿನ ಜನರು ಒಳಬರುವುದಕ್ಕೆ ನಿರ್ಬಂಧ ವಿಧಿಸಿದ್ದರು. ಇದೀಗ ಅಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.

ಇಂದು ಬೆಳಗ್ಗೆ ಸಾವಿರಾರು ಜನರು ವುಚಂಗ್ ಸ್ಟೇಷನ್ ಗೆ ಬಂದು ಬೇರೆ ಬೇರೆ ಕಡೆಗಳಿಗೆ ತೆರಳಲು ರೈಲು ಹತ್ತುವ ದೃಶ್ಯ ಕಂಡುಬಂತು.

SCROLL FOR NEXT