ವಿದೇಶ

ಚೀನಾದಲ್ಲಿ ಮತ್ತೆ ವಕ್ಕರಿಸಿದ ಕೊರೋನಾ ಮಹಾಮಾರಿ: 42 ಹೊಸ ಪ್ರಕರಣಗಳು ಪತ್ತೆ, 47 ಲಕ್ಷಣರಹಿತ ಕೇಸುಗಳು

Sumana Upadhyaya

ಬೀಜಿಂಗ್: ಚೀನಾ ಜನತೆ ಮಹಾಮಾರಿ ಕೊರೋನಾ ಸೋಂಕು ವೈರಸ್ ನಿಂದ ಮುಕ್ತಿ ಪಡೆಯುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ. ಅಲ್ಲಿ 42 ಮಂದಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಅವುಗಳಲ್ಲಿ 38 ಮಂದಿ ಹೊರ ದೇಶಗಳಿಂದ ಬಂದವರಾಗಿದ್ದಾರೆ. ಈ ಮೂಲಕ ಚೀನಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 81 ಸಾವಿರದ 907ಕ್ಕೇರಿದೆ.

ಕೊರೋನಾ ಸೋಂಕಿನಿಂದ ಗುಣಮುಖರಾದವರನ್ನು ಮತ್ತೆ ಮರು ಪರೀಕ್ಷೆಗೊಳಪಡಿಸಲಾಗುತ್ತಿದ್ದು ಈ ವೇಳೆ 47 ಹೊಸ ಕೊರೋನಾ ಲಕ್ಷಣರಹಿತ ಸೋಂಕು ಗೋಚರಿಸಿದೆ. ಅವುಗಳಲ್ಲಿ 14 ಮಂದಿ ಹೊರಗಿನಿಂದ ಬಂದವರಾಗಿದ್ದಾರೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, 42 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 38 ಮಂದಿ ಹೊರಗಿನಿಂದ ಬಂದವರಾಗಿದ್ದಾರೆ ಎಂದು ಹೇಳಿದೆ.

ಹೊಸ ಸೋಂಕು ಪ್ರಕರಣ ಹೆಚ್ಚುತ್ತಲೇ ಇರುವುದರಿಂದ, ಚೀನಾ ದೇಶ ನಿನ್ನೆ ಹೊಸ ಪ್ರಾಯೋಗಿಕ ಪ್ರೊಟೊಕಾಲ್ ಅನ್ನು ಅನಾವರಣಗೊಳಿಸಿದ್ದು, ಚೇತರಿಸಿಕೊಂಡ ಕೊರೋನಾ ವೈರಸ್ ರೋಗಿಗಳ ಮರು ಪರೀಕ್ಷೆ ವೇಳೆ ಮತ್ತೆ ಸೋಂಕು ಇದೆಯೇ ಎಂದು ಖಾತರಿಪಡಿಸುತ್ತದೆ. ಇದರಿಂದ ಕೊರೋನಾ ಸೋಂಕು ಎರಡನೇ ಹಂತದಲ್ಲಿ ವ್ಯಾಪಿಸುವುದರ ಬಗ್ಗೆ ಆತಂಕಗಳು ಬೆಳೆದಿವೆ.

ಕೊರೋನಾ ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾದ ವುಹಾನ್ ಪ್ರಾಂತ್ಯದಲ್ಲಿ 76 ದಿನಗಳ ಲಾಕ್ ಡೌನ್ ನಿನ್ನೆಗೆ ಮುಗಿದಿತ್ತು.

SCROLL FOR NEXT