ವಿದೇಶ

ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1 ಲಕ್ಷ ಜನರ ಸಾವು! 

Srinivas Rao BV

ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ. 

ಏ.10 ರಂದು ಜಾಗತಿಕವಾಗಿ ಕ್ರೈಸ್ತರ ಪವಿತ್ರ ಹಬ್ಬ ಗುಡ್ ಫ್ರೈಡೆ ಆಚರಣೆ ಇತ್ತು. ಈಸ್ಟರ್ ಹಿನ್ನೆಲೆ ವಿಶ್ವಾದ್ಯಂತ ಇರುವ ಆರೋಗ್ಯ ಅಧಿಕಾರಿಗಳು ಹಾಗೂ ಧಾರ್ಮಿಕ ನಾಯಕರು ಜನರು ಲಾಕ್ ಡೌನ್ ನ್ನು ಮೀರಿ ಹೊರಬರುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು.  

ಇಟಾಲಿಯಲ್ಲಿ ಡ್ರೋನ್, ಹೆಲಿಕಾಫ್ಟರ್, ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಸರ್ಕಾರ ಜನತೆ ಮನೆಯಿಂದ ಹೊರಗೆ ಬಾರದಂತೆ ತಡೆಯಿತು. ಈಸ್ಟರ್ ಹಿನ್ನೆಲೆಯಲ್ಲಿ ಕೆಲವು ಚರ್ಚ್ ಗಳು ಆನ್ ಲೈನ್ ಸೇವೆಗಳನ್ನು ಒದಗಿಸಿದ್ದು ವಿಶೇಷವಾಗಿತ್ತು. 

ಅಮೆರಿಕಾದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಾವಿನ ಸಂಖ್ಯೆ 18,000 ಕ್ಕೆ ಏರಿಕೆಯಾಗಿದ್ದು ಇಟಾಲಿಯನ್ನೂ ಮೀರಿಸುವ ಹಂತಕ್ಕೆ ಹೋಗಿದೆ. ಅರ್ಧ ಮಿಲಿಯನ್ ಗೂ ಹೆಚ್ಚು ಅಮೆರಿಕನ್ನರಿಗೆ ಸೋಂಕು ತಗುಲಿದ್ದು, ಸಾವನ್ನಪ್ಪಿರುವ ಶೇ.40 ರಷ್ಟು ಮಂದಿ ನ್ಯೂಯಾರ್ಕ್ ನವರಾಗಿದ್ದಾರೆ. 

SCROLL FOR NEXT