ವಿದೇಶ

ಕೋವಿಡ್-19 ಲಾಕ್ ಡೌನ್: ಫ್ರಾನ್ಸಿಸ್ ಪೋಪ್ ರಿಂದ ಈಸ್ಟರ್ ಸಂಡೆ ನೇರ ಪ್ರಸಾರ

Sumana Upadhyaya

ವಾಟಿಗನ್ ಸಿಟಿ: ಲಾಕ್ ಡೌನ್ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೋಪ್ ಫ್ರಾನ್ಸಿಸ್ ಶತಮಾನಗಳ ಸಂಪ್ರದಾಯಗಳನ್ನು ಮುರಿದು ಈಸ್ಟರ್ ಸಂಡೆ ಕಾರ್ಯಕ್ರಮವನ್ನು ನೇರ ಪ್ರಸಾರ ಮೂಲಕ ಕ್ರೈಸ್ತ ಧರ್ಮೀಯರಿಗೆ ಪ್ರವಚನ ಮಾಡಲಿದ್ದಾರೆ.

ಗುಡ್ ಫ್ರೈಡೆ ಮುಗಿದ ನಂತರ ಇಂದು ಈಸ್ಟರ್ ಸಂಡೆ ಕ್ಯಾಥೊಲಿಕ್ ಕ್ರೈಸ್ತ ಧರ್ಮೀಯರಿಗೆ ಅತ್ಯಂತ ಪವಿತ್ರ ದಿನ. ವ್ಯಾಟಿಕನ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಸೇರಿ ಆಚರಿಸುತ್ತಿದ್ದರು. ಆದರೆ ಈ ವರ್ಷ ಕೊರೋನಾ ವೈರಸ್ ನಿಂದಾಗಿ ಸಾಮೂಹಿಕವಾಗಿ ಸೇರಿ ಆಚರಿಸಲು ಸಾಧ್ಯವಾಗುತ್ತಿಲ್ಲ.

ಪೋಪ್ ಫ್ರಾನ್ಸಿಸ್ ಇಂದು ತಮ್ಮ ಖಾಸಗಿ ಗ್ರಂಥಾಲಯದಿಂದ ಧರ್ಮ ಬೋಧನೆ ಮಾಡಲಿದ್ದು ಅಲ್ಲಿಂದ ಇಡೀ ವಿಶ್ವದ ಕ್ರೈಸ್ತ ಧರ್ಮೀಯರಿಗೆ ನೋಡಲು, ಕೇಳಲು ಅವಕಾಶ ಕಲ್ಪಸಲು ನೇರ ಪ್ರಸಾರ ಮಾಡಲಾಗುತ್ತಿದೆ. ಕೊರೋನಾ ಸೋಂಕಿನಿಂದ ಹೊರಹೋಗಲು ಸಾಧ್ಯವಾಗದೆ 83 ವರ್ಷದ ಪೋಪ್ ಅವರಿಗೆ ಪಂಜರದೊಳಗೆ ಇದ್ದಂತಹ ಅನುಭವವಾಗುತ್ತಿದೆಯಂತೆ.

SCROLL FOR NEXT