ವಿದೇಶ

ಕೊರೋನಾ ವೈರಸ್ ವಿರುದ್ಧ ಹೋರಾಟ: 1970ರ ಬಳಿಕ ಕೆಟ್ಟ ಪರಿಸ್ಥಿತಿ ಕಂಡ ಚೀನಾ ದೇಶದ ಆರ್ಥಿಕತೆ

Sumana Upadhyaya

ಬೀಜಿಂಗ್: ಕೊರೋನಾ ವೈರಸ್ ನಿಂದ ಚೀನಾ ದೇಶ 1970ರ ನಂತರ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಆರ್ಥಿಕ ಕುಸಿತ ಕಂಡಿದೆ. ಈ ದುಸ್ಥಿತಿಯಿಂದ ಹೊರಬಂದು ಪುನಃ ಮೊದಲಿನಂತೆ ಆಗಲು ಕೆಲ ಸಮಯಗಳು ಹಿಡಿಯಬಹುದು ಎಂದು ವರದಿ ಹೇಳುತ್ತಿದೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿ ರಾಷ್ಟ್ರವಾಗಿರುವ ಚೀನಾ ದೇಶದಲ್ಲಿ ಫ್ಯಾಕ್ಟರಿಗಳು, ಅಂಗಡಿಗಳು, ಪ್ರವಾಸೋದ್ಯಮ, ಬಹುತೇಕ ಉದ್ದಿಮೆಗಳು ಮುಚ್ಚಿರುವುದರಿಂದ ಕಳೆದ ಮೂರು ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ ಶೇಕಡಾ 6.8ರಷ್ಟು ಆರ್ಥಿಕತೆ ಕುಸಿದಿದೆ ಎಂದು ಅಂಕಿಅಂಶ ಹೇಳುತ್ತದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ಕಂಡುಬಂದಿದೆ.

ಚೀನಾ ದೇಶದಲ್ಲಿ ಮಾರುಕಟ್ಟೆ ಮಾದರಿಯ ಆರ್ಥಿಕ ಸುಧಾರಣೆ 1979ರಲ್ಲಿ ಆರಂಭಗೊಂಡ ನಂತರ ಇದು ಅತ್ಯಂತ ಕೆಳಮಟ್ಟಕ್ಕೆ ಇಳಿದ ಆರ್ಥಿಕ ಕುಸಿತವಾಗಿದೆ. ಕೊರೋನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ನಂತರ ಇಡೀ ವಿಶ್ವವೇ ಚಟುವಟಿಕೆಗಳಿಂದ ಸ್ಥಬ್ಧವಾಗುವಂತೆ ಮಾಡಿದ ಚೀನಾದ ಆರ್ಥಿಕತೆ ಈ ತಿಂಗಳಲ್ಲಿಯೇ ಪುನಶ್ಚೇತನ ಕಾಣಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ತಾವು ಮಾರ್ಚ್ ತಿಂಗಳಲ್ಲಿಯೇ ಕೊರೋನಾ ವೈರಸ್ ನಿಂದ ಗೆದ್ದುಬಂದಿದ್ದು ಫ್ಯಾಕ್ಟರಿ, ಆಫೀಸುಗಳನ್ನು ಅಮೆರಿಕ ಮತ್ತು ಯುರೋಪ್ ಗಳಲ್ಲಿ ಕಟ್ಟುನಿಟ್ಟು ಮಾಡುವ ಮೊದಲೇ ತೆರೆದಿದ್ದೇವೆ ಎನ್ನುತ್ತಾರೆ. ಆದರೆ ಇನ್ನೂ ಚೀನಾದಲ್ಲಿ ಅಷ್ಟೊಂದು ಅಗತ್ಯವಲ್ಲದ ಸಿನೆಮಾ, ಸಲೂನ್ ಮತ್ತು ಇತರ ಉದ್ದಿಮೆಗಳನ್ನು ಇನ್ನೂ ಮುಚ್ಚಲಾಗಿದೆ. ಪ್ರವಾಸೋದ್ಯಮ ಪುನಶ್ಚೇತನಕ್ಕೆ ಕಷ್ಟಪಡುತ್ತಿದೆ.

ಕೊರೋನಾ ಮತ್ತೆ ಹರಡದಂತೆ ಕಟ್ಟೆಚ್ಚರ ವಹಿಸಲು ರಾಜಧಾನಿ ಬೀಜಿಂಗ್ ಮತ್ತು ಇತರ ಕೆಲ ನಗರಗಳಲ್ಲಿ ಕಟ್ಟುನಿಟ್ಟು ಮಾಡಲಾಗಿದೆ. ವಿದೇಶಿಗರನ್ನು ದೇಶದೊಳಗೆ ಬಿಡುತ್ತಿಲ್ಲ.

SCROLL FOR NEXT