ವಿದೇಶ

ಯುಕೆ: ಕೊರೋನಾ ವೈರಸ್ ಗೆ ಬಲಿಯಾದ ಅನ್ಯದೇಶೀಯರಲ್ಲಿ ಭಾರತೀಯರೇ ಹೆಚ್ಚು!

Raghavendra Adiga

ಲಂಡನ್: ಯುಕೆನಲ್ಲಿರುವ ಭಾರತೀಯರು ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದ ಹೆಚ್ಚು ಪೀಡಿತರಾಗಿರುವ ಜನಾಂಗವಾಗಿ ಹೊರಹೊಮ್ಮಿದ್ದಾರೆ ಎನ್ನುವುದು ಇಂಗ್ಲೆಂಡ್‌ನಾದ್ಯಂತದ ಆಸ್ಪತ್ರೆಗಳಲ್ಲಿ ಸಂಭವಿಸಿದೆ ಕೋವಿಡ್--19 ಸಾವುಗಳ ಅಧಿಕೃತ ಮಾಹಿತಿಯಿಂದ  ಬಹಿರಂಗವಾಗಿದೆ.

ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‌ಎಚ್‌ಎಸ್) ಇಂಗ್ಲೆಂಡ್ ಈ ವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ 17 ರವರೆಗೆ ಯುಕೆ ಆಸ್ಪತ್ರೆಗಳಲ್ಲಿ ಮರಣ ಹೊಂದಿದ 13,918 ಕೊರೋನಾ ರೋಗಿಗಳಲ್ಲಿ , ಶೇಕಡಾ 16.2 ರಷ್ಟು ಕಪ್ಪು, ಏಷ್ಯನ್ ಮತ್ತು ಅಲ್ಪಸಂಖ್ಯಾತ ಜನಾಂಗದವರಾಗಿದ್ದಾರೆ. ಅಷ್ಟು ಅಲ್ಲದೆ ಭಾರತೀಯ ಜನಾಂಗ ಇದರಲ್ಲಿ ಶೇ. 3 ರಷ್ಟಿದ್ದಾರೆ.ಕೋವಿಡ್ -19 ಸಾವಿನ ಸಂಖ್ಯೆಯಲ್ಲಿ ಶೇಕಡಾ 2.9 ರಷ್ಟು ಕೆರಿಬಿಯನ್ನರು ಶೇಕಡಾ 2.1 ಪಾಕಿಸ್ತಾನಿಗಳು ಇದ್ದಾರೆ.

"ನಾವು ಒಟ್ಟಾರೆಯಾಗಿ ಜನಸಂಖ್ಯೆ ಆಧಾರದಲ್ಲಿ ನೊಡಿದ್ದೇವೆ ಹೊರತು ಎನ್‌ಎಚ್‌ಎಸ್‌ನಲ್ಲಿ ಕೆಲಸ ಮಾಡುವವರಲ್ಲಿ, ಅಲ್ಪಸಂಖ್ಯಾತ ಹಿನ್ನೆಲೆಯವರದ್ದೇ ಹೆಚ್ಚಿನ ಮರಣ ಸಂಭವಿಸಿರುವುದುನಿಜವಾಗಿಯೂ ಚಿಂತೆ ತಂದಿದೆ"ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್  ಹೇಳಿದ್ದಾರೆ.

ಒಟ್ಟು ಜನಸಂಖ್ಯೆಯ ಸರಿಸುಮಾರು 13 ಪ್ರತಿಶತದಷ್ಟು ಎಂದು ಭಾವಿಸಿದರೆ ಬಿಎಎಂಇ ಗುಂಪುಗಳಲ್ಲಿನ ಸಾವಿನ ಪ್ರಮಾಣವು ಹೆಚ್ಚಾಗಿದೆ. ಬಿಳಿ ಜನಾಂಗ`ದವರು ಶೇಕಡಾ 73.6  ಮಿಶ್ರ ಜನಾಂಗ  ಶೇಕಡಾ 0.7 ಎಂದು ಅಂಕಿ ಸಂಖ್ಯಗಳು ಹೇಳುತ್ತಿದೆ. 16.2 ಶೇಕಡಾ ಬಿಎಎಂಇ  ವಿಭಾಗದಲ್ಲಿ ಬಾಂಗ್ಲಾದೇಶಕ್ಕೆ ಸೇರಿದವರು ಶೇಕಡಾ 0.6, ಆಗಿದ್ದರೆ ಇತರೆ ಏಷ್ಯಾ ವಿಭಾಗದವರು 1.6 ಶೇಕಡಾ, 1.9 ಶೇಕಡಾ ಆಫ್ರಿಕನ್ನರು ಇನ್ನು ಆಫ್ರಿಕಾ ಹೊರತಾದ ಕಪ್ಪು ಜನಾಂಗ  0.9 ಶೇಕಡಾ, 0.4 ಶೇಕಡಾ ಚೀನೀಯರು ಬೇರೆ ರಾಷ್ಟ್ರದವರೆಲ್ಲಾ ಸೇರಿ 2.8 ಶೇಕಡಾ ಜನರು ಸಾವಿಗೀಡಾಗಿದ್ದಾರೆ.

SCROLL FOR NEXT