ವಿದೇಶ

ಇರುಳ ಕಂಡ ಬಾವಿಗೆ ಹಗಲು ಬಿದ್ದ ಇಮ್ರಾನ್, ಚೀನಾದ ವ್ಯೂಹದಲ್ಲಿ ಸಿಲುಕಿ 'ಡೆಡ್ಲಿ ಲ್ಯಾಬ್' ಆದ ಪಾಕ್!

Vishwanath S

ನವದೆಹಲಿ: ಪರಮಿತ್ರ ಪಾಕಿಸ್ತಾನವನ್ನೇ ಚೀನಾ ತನ್ನ ಚಕ್ರವ್ಯೂಹಕ್ಕೆ ಸಿಲುಕಿಸಿದೆ. ಹೌದು ಚೀನಾ ಪಾಕಿಸ್ತಾನವನ್ನು ಪ್ರಯೋಗ ಪಶು ಆಗಿ ಬಳಸಿಕೊಳ್ಳುತ್ತಿದೆ. 

ಕೊರೋನಾ ಮಹಾಮಾರಿ ಜಗತ್ತಿನಾದ್ಯಂತ ರುದ್ರತಾಂಡವವಾಡುತ್ತಿದ್ದು 210 ರಾಷ್ಟ್ರಗಳನ್ನು ಆವರಿಸಿಕೊಂಡಿದೆ. ಇದರ ಜೊತೆಗೆ ಪಾಕಿಸ್ತಾನವು ಮಹಾಮಾರಿ ಹೊಡೆತಕ್ಕೆ ಸಿಲುಕಿದೆ. ಹೀಗಾಗಿ ಕೊರೋನಾಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ಬಲಿಷ್ಠ ರಾಷ್ಟ್ರಗಳು ಪ್ರಯೋಗಗಳನ್ನು ನಡೆಸುತ್ತಿದೆ.

ಚೀನಾ ಸಹ ಕೊರೋನಾ ವೈರಸ್ ಗೆ ಲಸಿಕೆಯನ್ನು ತಯಾರಿಸುತ್ತಿದ್ದು ಅದನ್ನು ಪಾಕಿಸ್ತಾನದವರ ಮೇಲೆ ಪ್ರಯೋಗಿಸುತ್ತಿದೆ. ಒಂದು ವೇಳೆ ಲಸಿಕೆ ಯಶಸ್ವಿಯಾದರೆ ಅದರ ಖ್ಯಾತಿ ಚೀನಾಗೆ ಬರುತ್ತದೆ. ಲಸಿಕೆ ವಿಫಲವಾದರೆ ಅದರ ಅಪಾಯಕ್ಕೆ ಪಾಕಿಸ್ತಾನದ ನಾಗರೀಕರು ಸಿಲುಕಬೇಕಾಗುತ್ತದೆ.

ಈ ಆಘಾತಕಾರಿ ಸುದ್ದಿಯನ್ನು ಸ್ವತಃ ಪಾಕಿಸ್ತಾನದ ಟಿವಿ ಚಾನೆಲ್ ಹೇಳಿಕೊಳ್ಳುತ್ತಿದೆ. ಕೊರೋನಾಗೆ ಚೀನಾ ಲಸಿಕೆ ಕಂಡು ಹಿಡಿದಿದೆ ನಿಜ. ಆದರೆ ಅದರ ಪ್ರಯೋಗವನ್ನು ಚೀನಾ ಬಿಟ್ಟು ಪಾಕಿಸ್ತಾನಿಗರ ಮೇಲೆ ಮಾಡುತ್ತಿರುವುದು ಯಾಕೆ ಎಂಬ ಅನುಮಾನ ವ್ಯಕ್ತಪಡಿಸಿದೆ. 

ಚಾಣಾಕ್ಷ ಚೀನಾ ಪಾಕಿಸ್ತಾನದ ಅಸಹಾಯಕತೆ ಮತ್ತು ಅವಿವೇಕತನವನ್ನು ಬಳಸಿಕೊಳ್ಳುತ್ತಿರುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. 

ಪಾಕಿಸ್ತಾನದಲ್ಲಿ ಕೊರೋನಾ ವೈರಸ್ ಗೆ 10,811 ಮಂದಿ ತುತ್ತಾಗಿದ್ದು 228 ಮಂದಿ ಸಾವನ್ನಪ್ಪಿದ್ದಾರೆ. 

SCROLL FOR NEXT