ವಿದೇಶ

ಕೋವಿಡ್-19 ಲಾಕ್ ಡೌನ್: ಅಮೆರಿಕಾದಲ್ಲಿ ವೃದ್ಧರು, ಮಕ್ಕಳ ಮುಖದಲ್ಲಿ ನಗೆ ತರುತ್ತಿರುವ ಭಾರತೀಯ ಮೂಲದ ಬಾಲಕಿ ಹಿತಾ ಗುಪ್ತ

Sumana Upadhyaya

ವಾಷಿಂಗ್ಟನ್: ಈಕೆಯ ವಯಸ್ಸಿನ ಬೇರೆ ಸಾಮಾನ್ಯ ಮಕ್ಕಳಾದರೆ ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಆಟವಾಡಿಕೊಂಡು, ವಿಡಿಯೊ ಗೇಮ್ ಆಡಿಕೊಂಡು, ಸಿನೆಮಾ ನೋಡಿಕೊಂಡು ಇರುತ್ತಾರೆ.

ಆದರೆ ಭಾರತೀಯ ಮೂಲದ 15 ವರ್ಷದ ಹಿತಾ ಗುಪ್ತ ಅಮೆರಿಕದಲ್ಲಿ ನರ್ಸಿಂಗ್ ಹೋಂಗಳಲ್ಲಿರುವ ನೂರಾರು ಹಿರಿಯರು ಮತ್ತು ಮಕ್ಕಳಿಗೆ ಗಿಫ್ಟ್ ಪ್ಯಾಕ್ ಮತ್ತು ಅವರಲ್ಲಿ ಉತ್ತೇಜನ ತುಂಬಿಸುವ ನೋಟ್ ಗಳನ್ನು ಬರೆದು ಕಳುಹಿಸುತ್ತಿದ್ದಾಳೆ.

10ನೇ ತರಗತಿಯ ಪೆನ್ಸಿಲ್ವೇನಿಯಾ ವಿದ್ಯಾರ್ಥಿನಿ ಕೊನೆಸ್ಟೊಗಾ ಹೈಸ್ಕೂಲ್ ನಲ್ಲಿ ಓದುತ್ತಿರುವ ಹಿತಾ ಗುಪ್ತ ‘ಬ್ರೈಟನಿಂಗ್ ಎ ಡೆ’ ಎಂಬ ಎನ್ ಜಿಒ ಮೂಲಕ ಕೋವಿಡ್ 19 ನಿರ್ಬಂಧ ಹಿನ್ನೆಲೆಯಲ್ಲಿ ನರ್ಸಿಂಗ್ ಹೋಂ, ನಿವಾಸಿಗಳು, ಹಿರಿಯ ನಾಗರಿಕರಿಗೆ ಪ್ರೀತಿ, ಆಶಾಭಾವನೆ, ಸಂತೋಷಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ.

ಕೊರೋನಾ ಲಾಕ್ ಡೌನ್ ಕಾರಣದಿಂದ ಅನೇಕ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಬಹಳ ನೋವು ಅನುಭವಿಸುತ್ತಿರುತ್ತಾರೆ. ಹೊರಗೆ ಓಡಾಡಲು ಸಾಧ್ಯವಾಗುವುದಿಲ್ಲ, ತಮ್ಮ ಪ್ರೀತಿಪಾತ್ರರನ್ನು ನೋಡಲು ಆಗುವುದಿಲ್ಲ ಎಂದು ನೊಂದುಕೊಳ್ಳುತ್ತಾರೆ. ಅಂತವರಿಗೆ ಖುಷಿಪಡಿಸಲು ಪಝಲ್, ಕಲರ್ ಪುಸ್ತಕ, ಕಲರ್ ಪೆನ್ಸಿಲ್ ಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತೇನೆ. ಕೈಬರಹದ ನೋಟ್ಸ್ ಕಳುಹಿಸುತ್ತೇನೆ. ಇತ್ತೀಚಿನ ಜೀವನಶೈಲಿಯಲ್ಲಿ ಹೆಚ್ಚಾಗಿ ವೃದ್ಧರು ಏಕಾಂತ, ಪ್ರತ್ಯೇಕತೆ ಅನುಭವಿಸುತ್ತಿರುತ್ತಾರೆ. ಒಂದು ಅಧ್ಯಯನ ಪ್ರಕಾರ ಶೇಕಡಾ 40ರಷ್ಟು ಹಿರಿಯ ನಾಗರಿಕರಿಗೆ ಈ ಅನುಭವ ಆಗುತ್ತಿರುತ್ತದೆ ಎಂದು ಗುಪ್ತ ಪಿಟಿಐಗೆ ಇಮೇಲ್ ಸಂವಾದದಲ್ಲಿ ತಿಳಿಸಿದ್ದಾಳೆ.

ಈ ವಿಷಯವನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಂಚಿಕೊಂಡಿದೆ. ಹಿತಾ ಎನ್ ಜಿಒ ಮೂಲಕ 2,700 ಮಕ್ಕಳು, 50 ಆಸ್ಪತ್ರೆಗಳಲ್ಲಿರುವ ಹಿರಿಯ ನಾಗರಿಕರು, ನರ್ಸಿಂಗ್ ಹೋಂಗಳನ್ನು ಅಮೆರಿಕದ 7 ರಾಜ್ಯಗಳಿಗೆ ಸಂಪರ್ಕಿಸಿ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ.

SCROLL FOR NEXT