ವಿದೇಶ

ನಿಮ್ಮಿಂದಾಗಿ ನಮಗೆ ಭಾರೀ ನಷ್ಟವಾಗಿದೆ, ಅದನ್ನು ತುಂಬಿಕೊಡಿ, ತನಿಖೆ ನಡೆಸುತ್ತೇವೆ: ಚೀನಾ ವಿರುದ್ಧ ಅಮೆರಿಕ ಆಕ್ರೋಶ

Sumana Upadhyaya

ವಾಷಿಂಗ್ಟನ್: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಅಪಾರ ಪ್ರಮಾಣದ ಸಾವು-ನೋವು, ನಷ್ಟಗಳಿಂದ ಮೊದಲ ಬಾರಿಗೆ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶಕ್ಕೀಡಾಗಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ.

ಕೊರೋನಾ ವೈರಸ್ ಹಬ್ಬಿಸಿದ ಚೀನಾದಿಂದ 140 ಶತಕೋಟಿ ಡಾಲರ್ ಪರಿಹಾರವನ್ನು ಜರ್ಮನಿ ಕೇಳಿದರೆ, ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರವನ್ನು ಅಮೆರಿಕಾ ಕೇಳಿದೆ.

ನವೆಂಬರ್ ಮಧ್ಯಭಾಗದಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ನಂತರ ಜಾಗತಿಕ ಮಟ್ಟದಲ್ಲಿ ಪಸರಿಸಿ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ ಹೆಚ್ಚಿನ ಸಂಖ್ಯೆ ಹೊಂದಿರುವುದು ಅಮೆರಿಕಾದಲ್ಲಿ. ಇಲ್ಲಿ 56 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 1 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದಾರೆ.

ಇಡೀ ವಿಶ್ವಕ್ಕೆ ಇಂದು ಕೊರೋನಾ ಸೋಂಕಿನಿಂದ ನಷ್ಟವಾಗಿದೆ. ನಮ್ಮ ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ಆಗಿದೆ. ಕೊರೋನಾ ವೈರಸ್ ಹಬ್ಬಲು ಚೀನಾ ದೇಶವೇ ಕಾರಣ. ಕೊರೋನಾ ಸೋಂಕು ಕಾಣಿಸಿಕೊಂಡು ಅದು ಹಬ್ಬುತ್ತಿದೆ ಎಂದು ಗೊತ್ತಾದಾಗಲೇ ಅದನ್ನು ಆರಂಭದಲ್ಲಿಯೇ ಮಟ್ಟಹಾಕಬಹುದಾಗಿತ್ತು. ಆದರೆ ಅದನ್ನು ನಿಯಂತ್ರಿಸದೆ ಹಬ್ಬಲುಬಿಟ್ಟಿತು. ಈ ಬಗ್ಗೆ ನಾವು ಗಂಭೀರವಾಗಿ ತನಿಖೆ ಕೈಗೊಳ್ಳುತ್ತೇವೆ. ಚೀನಾ ಮೇಲೆ ನಮಗೆ ಸಿಟ್ಟು, ಆಕ್ರೋಶವಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

SCROLL FOR NEXT