ವಿದೇಶ

ಕೊರೋನಾದಿಂದ ಬಚಾವಾಗಲು ವಿಷಕಾರಿ ಮಿಥೇನಾಲ್ ಸೇವನೆ: 700 ಮಂದಿ ದುರ್ಮರಣ

Shilpa D

ತೆಹ್ರಾನ್: ಕೆಮಿಕಲ್ ಸೇವಿಸಿದರೆ ಕೊರೋನಾ ವೈರಸ್ ಗುಣಪಡಿಸಬಹುದು ಎಂಬ ಮೂಢನಂಬಿಕೆಯಿಂದ ವಿಷಕಾರಿ ಮಿಥೇನಾಲ್  ಸೇವಿಸಿದ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ. ಇರಾನ್ ನಲ್ಲಿ ಸೋಂಕಿತರ ಸಂಖ್ಯೆ 91 ಸಾವಿರ ಗಡಿ ದಾಟಿದ್ದು 5 ಸಾವಿರ ಜನರು ಮರಣ ಹೊಂದಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ತಿಳಿಸಿದೆ. 

ಈ ರೀತಿ ವಿಷಕಾರಿ ಆಲ್ಕೋಹಾಲ್ ಸೇವಿಸಿ ಸತ್ತಿರುವವರ ಸಂಖ್ಯೆ ಶೇ.10 ರಷ್ಟು ಹೆಚ್ಟಾಗಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ನೂರಕ್ಕೂ ಹೆಚ್ಚಿನವರಲ್ಲಿ ದೃಷ್ಟಿ ಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಇರಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ಫೆಬ್ರವರಿಯಿಂದ ಏಪ್ರಿಲ್ 7ರ ವರೆಗೆ ಸುಮಾರು 728 ಮಂದಿ ಬಲಿಯಾಗಿದ್ದಾರೆ. ಮಿಥೇನಾಲ್ ಎಂಬುದು ವಾಸನೆ ಇರುವುದಿಲ್ಲ. ಜೊತೆಗೆ ರುಚಿಯೂ ಇರುವುದಿಲ್ಲ, ಇದರಲ್ಲಿ ಟಾಕ್ಸಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಲ್ಕೋಹಾಲಿಕ್ ದ್ರವಣಗಳಲ್ಲಿ ಅಕ್ರಮವಾಗಿ ಇರಾನ್ ನಲ್ಲಿ ಇದನ್ನು ಬಳಸಲಾಗುತ್ತಿದೆ.

SCROLL FOR NEXT