ವಿದೇಶ

ಅಮೆರಿಕ ಕೂಡ ಚೀನಾ ಆಪ್ ಟಿಕ್ ಟಾಕ್ ಗೆ ನಿಷೇಧ: ಅಧ್ಯಕ್ಷ ಡೊನಾಲ್ಡ್ ಟ್ರಂಪ್

Sumana Upadhyaya

ವಾಷಿಂಗ್ಟನ್ ಡಿಸಿ: ಚೀನಾ ದೇಶದ ಜನಪ್ರಿಯ ಟಿಕ್ ಟಾಕ್ ಅಪ್ಲಿಕೇಷನ್ ಭಾರತದಲ್ಲಿ ನಿಷೇಧ ಆಯ್ತು, ಇದೀಗ ಅಮೆರಿಕ ಕೂಡ ಅದರ ನಿಷೇಧಕ್ಕೆ ಮುಂದಾಗಿದೆ.

ಚೀನಾದ ಗುಪ್ತಚರಕ್ಕೆ ಟಿಕ್ ಟಾಕ್ ಮೂಲಕ ಮಾಹಿತಿ ರವಾನೆಯಾಗುತ್ತದೆ ಎಂಬ ಆತಂಕದಿಂದ ಟಿಕ್ ಟಾಕ್ ಸೋಷಿಯಲ್ ಮೀಡಿಯಾ ಆಪ್ ಬಳಕೆಗೆ ನಿಷೇಧ ಹೇರಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ತನ್ನ ಗುಪ್ತಚರ ರಹಸ್ಯ ಚಟುವಟಿಕೆಗಳಿಗೆ ಸೋಷಿಯಲ್ ಮೀಡಿಯಾ ಆಪ್ ನ್ನು ಚೀನಾ ಬಳಸುತ್ತದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ ಟಿಕ್ ಟಾಕ್ ಆಪ್ ಕಂಪೆನಿ ಸರ್ಕಾರ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದೆ.

ನಿನ್ನೆ ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ಟಿಕ್ ಟಾಕ್ ನ ಮೂಲ ಸಂಸ್ಥೆ ಬೈಟ್ ಡಾನ್ಸ್ ಆಪ್ ನ್ನು ಅಮೆರಿಕ ಇಟ್ಟುಕೊಳ್ಳುತ್ತದೆ ಎಂದು ಹೇಳಲಾಗಿತ್ತಾದರೂ ಕೊನೆಗೆ ಅಧ್ಯಕ್ಷರೇ ಟಿಕಿ ಟಾಕ್ ನಿಷೇಧ ಮಾಡುವುದಾಗಿ ಘೋಷಿಸಿದರು.

ಏರ್ ಫೋರ್ಸ್ ಒನ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್, ಟಿಕ್ ಟಾಕ್ ಅಪ್ಲಿಕೇಷನ್ ಗೆ ಅಮೆರಿಕದಿಂದ ಅದನ್ನು ಬಹಿಷ್ಕಾರ ಹಾಕುತ್ತಿದ್ದೇವೆ. ಈ ಬಗ್ಗೆ ಆದೇಶ ಹೊರಡಿಸುವುದಾಗಿ ತಿಳಿಸಿದರು.

SCROLL FOR NEXT