ವಿದೇಶ

ಏಷ್ಯಾ ದೇಶಗಳು ದೀರ್ಘಕಾಲದವರೆಗೆ ಕೊರೋನಾ ಮಹಾಮಾರಿ‌ ವಿರುದ್ಧ ಹೋರಾಡಬೇಕು; ಡಬ್ಲ್ಯುಎಚ್‌ಒ ಎಚ್ಚರಿಕೆ

Vishwanath S

ವಿಶ್ವಸಂಸ್ಥೆ: ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳ ಏರಿಕೆ ಗಮನಿಸಿದರೆ ಅತಿ ಹೆಚ್ಚು ಜನಸಂಖ್ಯೆಯಿರುವ ವಿಶೇಷವಾಗಿ ಏಷಿಯಾ ದೇಶಗಳಲ್ಲಿ ಸಾಂಕ್ರಮಿಕದ ಹೋರಾಟ ದೀರ್ಘಕಾಲಿಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಭಿಪ್ರಾಯಪಟ್ಟಿದೆ.

ಆರು  ತಿಂಗಳ ಹಿಂದೆ ಡಬ್ಲ್ಯುಎಚ್‌ಒ ಕೊರೋನಾ ವೈರಸ್‌ ಸಾಂಕ್ರಮಿಕವನ್ನು ಜಾಗತಿಕ ಆರೋಗ್ಯ  ತುರ್ತು ಪರಿಸ್ಥಿತಿ ಘೋಷಿಸಿತ್ತು. ಅಂದಿನಿಂದ ಇಂದಿನವರೆಗೆ ವಿಶ್ವದಲ್ಲಿ 6.80 ಲಕ್ಷ  ಜನರು  ಮೃತಪಟ್ಟಿದ್ದು, 17.5 ಮಿಲಿಯನ್‌ ಜನರಿಗೆ ಸೋಂಕು ತಗುಲಿದೆ.

ವಿಶ್ವದ  ಹೆಚ್ಚಿನ ದೇಶಗಳು  ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದು, ವಿಶೇಷವಾಗಿ  ಏಷ್ಯಾದ ದೇಶಗಳ ಸ್ಥಿತಿಗತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ  ದೇಶಗಳು ಭಾರಿ ಜನಸಂಖ್ಯೆ ಮತ್ತು ಅಸಮರ್ಪಕ ಆರೋಗ್ಯ ವ್ಯವಸ್ಥೆ ಹೊಂದಿವೆ ಮತ್ತು ಕಠಿಣ ನಿರ್ಬಂಧಗಳ ಹೊರತಾಗಿಯೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ಡಬ್ಲ್ಯುಎಚ್‌ಒ ವೆಬ್‌ಸೈಟ್  ವರದಿ ಮಾಡಿದೆ.

SCROLL FOR NEXT