ವಿದೇಶ

ಕುಲಭೂಷಣ್ ಜಾದವ್ ಪ್ರಕರಣ ವಾದಿಸಲು 3 ಹಿರಿಯ ವಕೀಲರನ್ನು ನೇಮಿಸಿದ ಪಾಕಿಸ್ತಾನ ಕೋರ್ಟ್!

Srinivasamurthy VN

ಇಸ್ಲಾಮಾಬಾದ್: ಕುಲಭೂಷಣ್ ಜಾದವ್ ಪ್ರಕರಣ ವಾದಿಸಲು ಪಾಕಿಸ್ತಾನ ಕೋರ್ಟ್ ಮೂವರು ಹಿರಿಯ ವಕೀಲರನ್ನು ಆ್ಯಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದೆ.

ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಸೇನೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ಗೆ, ಮುಕ್ತ ರಾಜತಾಂತ್ರಿಕ ಭೇಟಿಗೆ ಇಸ್ಲಾಮಾಬಾದ್ ಹೈಕೋರ್ಟ್ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಅಖ್ತರ್ ಮಿನಾಲ್ಹಾ ಮತ್ತು ನ್ಯಾಯಮೂರ್ತಿ ಮಿಯಾಗುಲ್ ಹಸನ್ ಔರಂಗಜೇಬ್ ಅವರಿದ್ದ ದ್ವಿಸದಸ್ಯ ಸಮಿತಿಯು ಪಾಕಿಸ್ತಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.  ಅಲ್ಲದೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಅಬಿದ್ ಹಸನ್ ಮಾಂಟೊ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾದ ಹಮೀದ್ ಖಾನ್ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಪಾಕಿಸ್ತಾನದ ಮಾಜಿ ಅಟಾರ್ನಿ ಜನರಲ್ ಮಖ್ದೂಮ್ ಅಲಿ ಖಾನ್ ಅವರನ್ನು ಕುಲಭೂಷಣ್ ಜಾದವ್ ಪ್ರಕರಣ ವಾದಿಸಲು ನೇಮಕ ಮಾಡಲಾಗಿದೆ ಎಂದು ತಮ್ಮ ಆದೇಶದಲ್ಲಿ ಹೇಳಿದೆ.

ಭಾರತದ ಪರ ಗೂಢಚಾರಿಕೆ, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಚು ನಡೆಸಿದ ಆರೋಪದ ಮೇಲೆ 50 ವರ್ಷದ, ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ 2017ರ ಏಪ್ರಿಲ್ ತಿಂಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಲು ವಕೀಲರ ನೆರವು ಪಡೆಯಲು ಜಾಧವ್ ಅವರಿಗೆ ಪಾಕಿಸ್ತಾನ ಅವಕಾಶ ನಿರಾಕರಿಸಿದೆ ಎಂದು ಭಾರತ ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿತ್ತು. ಆದರೆ ಐಸಿಜೆ ಭಾರತದ ಪರವಾಗಿ ಆದೇಶ ನೀಡಿತ್ತು. 

ಇಸ್ಲಾಮಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಖ್ತರ್ ಮಿನಾಲ್ಹಾ ಮತ್ತು ನ್ಯಾಯಮೂರ್ತಿ ಮಿಯಾಗುಲ್ ಹಸನ್ ಔರಂಗಜೇಬ್ ಅವರಿದ್ದ ದ್ವಿಸದಸ್ಯ ಸಮಿತಿಯು ಪಾಕಿಸ್ತಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಜಾಧವ್ ಅವರಿಗಾಗಿ ಕಾನೂನು ಪ್ರತಿನಿಧಿ ನೇಮಿಸಬೇಕು ಎಂದು ಪಾಕ್ ಸರ್ಕಾರ ಅರ್ಜಿಯಲ್ಲಿ ಕೋರಿತ್ತು. ‘ಈಗ ವಿಷಯ ಕೋರ್ಟ್ ಪರಿಧಿಯಲ್ಲಿದೆ. ಭಾರತ ಸರ್ಕಾರಕ್ಕೆ ಏಕೆ ಇನ್ನೊಂದು ಅವಕಾಶ ನೀಡಬಾರದು?' ಎಂದು ನ್ಯಾಯಮೂರ್ತಿ ಮಿನಾಲ್ಹಾ ಪ್ರಶ್ನಿಸಿದರು.

ನ್ಯಾಯಮೂರ್ತಿಗಳ ಮಾತಿಗೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಜಾವೇದ್ ಖಾನ್ ಅವರು,  ‘ಭಾರತ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗಿದೆ’ ಎಂದು ತಿಳಿಸಿದರು. ಪ್ರಕರಣವನ್ನು ಸೆ.3ಕ್ಕೆ ಮುಂದೂಡಲಾಗಿದೆ.

ಕುಲಭೂಷಣ್ ಜಾದವ್ ಗೆ ದೂತಾವಾಸ ಸೌಲಭ್ಯ ಕಲ್ಪಿಸಬೇಕು ಎಂದಿದ್ದ ಪಾಕಿಸ್ತಾನ ಹೈಕೋರ್ಟ್
ಕುಲಭೂಷಣ್ ಜಾಧವ್ ಅವರಿಗೆ ಮೂರನೇ ಬಾರಿ ದೂತಾವಾಸ ಸೌಲಭ್ಯ ಕಲ್ಪಿಸಬೇಕು, ಅವರಗೆ ಒಬ್ಬ ವಕೀಲರನ್ನೂ ನೇಮಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಪಾಕಿಸ್ತಾನ ಸರ್ಕಾರಕ್ಕೆ ಆದೇಶ ನೀಡಿತ್ತು.

SCROLL FOR NEXT