ವಿದೇಶ

ದುಬೈ: ಏಪ್ರಿಲ್‌ನಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ವ್ಯಕ್ತಿ ಶವವಾಗಿ ಪತ್ತೆ

Raghavendra Adiga

ದುಬೈ: ಈ ವರ್ಷ ಏಪ್ರಿಲ್‌ನಿಂದ ನಾಪತ್ತೆಯಾಗಿದ್ದ ದುಬೈನಲ್ಲಿ ವಾಸವಿದ್ದ ಭಾರತೀಯ ವಲಸಿಗ ವ್ಯಕ್ತಿಯ ಶವ ಇಂದು ಪತ್ತೆಯಾಗಿರುವುದಾಗಿ ಮಾಧ್ಯಮ ವರದಿ  ಹೇಳಿದೆ.

ಕೇರಳ ಮೂಲದ ಶ್ರೀಧರನ್ ದೇವಕುಮಾರ್ (54) ದುಬೈನ ಖಾಸಗಿ ರೆಂಟ್ ಗೆ-ಎ-ಕಾರ್ ಕಂಪನಿಯ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಅವರು ಏಪ್ರಿಲ್ 28 ರಂದು ನಾಪತ್ತೆಯಾಗಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಏಪ್ರಿಲ್ 23 ರಂದು ಮನೆಗೆ ಮರಳಲು ಟಿಕೆಟ್ ಕಾಯ್ದಿರಿಸಿದ್ದ ಶ್ರೀಧರನ್ ಅವರನ್ನು ಹುಡುಕಲು ಸಹಾಯ ಮಾಡಲು ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗಿ ದುಬೈ ಮೂಲದ ಸಮಾಜ ಸೇವಕ ನಸೀರ್ ವತನಪಲ್ಲಿ  ಹೇಳಿದ್ದಾರೆ.

ಕಳೆದ ತಿಂಗಳು ಬಂದರಿನ ನೀರಿನಲ್ಲಿ ಕೊಳೆತ ಶವ ಪತ್ತೆಯಾಗಿದೆ ಎಂದು ದೃಢಪಡಿಸಿದ ಪೊಲೀಸರಿಂದ ನಮಗೆ ಕರೆ ಬಂದಿತ್ತೆಂದು ವತನಪಲ್ಲಿ ಹೇಳಿದರು."ಆದರೆ ದೇಹವು ಕೆಟ್ಟದಾಗಿ ಕೊಳೆತು ಹೋಗಿದ್ದರಿಂದ ಅದನ್ನು ಗುರುತಿಸಲು ಸಮಯ ಹಿಡಿಯಿತು. ಇದಲ್ಲದೆ, ಡಿಎನ್‌ಎ ಪರೀಕ್ಷೆಯನ್ನು ಸಹ ನಡೆಸಲಾಯಿತು. ದೇಹದ ಪ್ಯಾಂಟ್ ಜೇಬಿನಲ್ಲಿ ಒಂದು ಕೀಲಿಕೈ ಕಂಡುಬಂದಿದ್ದು ಅದರ ನಂತರ ಅಧಿಕಾರಿಗಳು ಶ್ರೀಧರನ್  ಅವರ ಅಪಾರ್ಟ್‌ಮೆಂಟ್‌ನ ಕೀಲಿಕೈ ಇದುವೇ ಆಗಿದೆಯೆ ಎಂದು ಪರಿಶೀಲಿಸಿದರು. ಅವರು ಬಾಗಿಲು ತೆರೆಯುವಲ್ಲಿ ಯಶಸ್ವಿಯಾದ ನಂತರ ಮತ್ತು ಡಿಎನ್ಎ ಪರೀಕ್ಷಾ ಫಲಿತಾಂಶಗಳು ಹೊಂದಿಕೆಯಾದ ನಂತರ, ದೇಹವು ಶ್ರೀಧರನ್ ಅವರದ್ದೆಂದು  ತೀರ್ಮಾನಿಸಲಾಯಿತು" ಎಂದು ವತನಪಲ್ಲಿ ವಿವರಿಸಿದ್ದಾರೆ.

ಮೃತರ ಕುಟುಂಬವು ಯುಎಇಯಲ್ಲಿಯೇ ಅವರ ಶವವನ್ನು ದಹನ ಮಾಡಲು ಅನುಮತಿ ನೀಡಿದೆ. ಶ್ರೀಧರನ್  ತನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಕೋವಿಡ್ ಬೆಳವಣಿಗೆಗಳ ನಂತರ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.

ಕೋವಿಡ್ ಕಾರಣ  ತನ್ನ ಕುಟುಂಬವನ್ನು ನೋಡಲು ಮನೆಗೆ ತೆರಳಲು ಸಾಶ್ಯವಾಗದ್ದಕ್ಕೆ ಶ್ರೀಧರನ್ "ಖಿನ್ನತೆ"ಗೆ ಒಳಗಾಗಿದ್ದರೆನ್ನಲಾಗಿದೆ, ಅವರ ಸೋದರಳಿಯ ಶ್ರೀಕಾಂತ್ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ" ಅವರು ಸುದ್ದಿ ವಾಹಿನಿಗಳಿಗೆ ದುಂಬಾಲು ಬಿದ್ದಿದ್ದರು,  ಅವರು ಮನೆಯಲ್ಲಿಯೇ ಇರುವಾಗ ಎಲ್ಲಾ ಸಮಯ ಚಿಂತೆಯಲ್ಲಿ ಮುಳುಗಿದ್ದರು" ಎಂದಿದ್ದಾರೆ. ಶ್ರೀಧರನ್ ಅವರಿಗೆ ವೇತನ ಕಡಿತದ ಭಯವಿತ್ತು, ಶಾಲಾ ಮಕ್ಕಳನ್ನು ಮುಂದೆ ಓದಿಸಲಾದೆನ್ನುವ ಬಗೆಗೆ ಬೇಸರವೂ ಇತ್ತು ಎಂದು ಅವರ ಸೋದರ ವಿವರಿಸಿದ್ದರು.

SCROLL FOR NEXT