ವಿದೇಶ

ಭಾರತದಿಂದ ಹಾವಿನ ವಿಷ ನಿರೋಧಕ ಲಸಿಕೆ ಆಮದು ಸ್ಥಗಿತ, ವಾಯುವ್ಯ ಪಾಕಿಸ್ತಾನದಲ್ಲಿ ಸಂಕಷ್ಟ!

Vishwanath S

ಪೇಶಾವರ್: ಗಡಿ ವಿವಾದದಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದ್ದು ಭಾರತದಿಂದ ಆಮದು ಸ್ಥಗಿತಗೊಂಡಿದ್ದರಿಂದ ವಾಯುವ್ಯ ಪಾಕಿಸ್ತಾನದಲ್ಲಿ ಹಾವಿನ ವಿಷ ನಿರೋಧಕ ಲಸಿಕೆಯ ಕೊರತೆ ಎದುರಾಗಿದೆ. 

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಆರೋಗ್ಯ ಸಚಿವ ತೈಮೂರ್ ಸಲೀಮ್ ಅವರು ಪ್ರಾಂತೀಯ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.

ಜಮಾತೆ-ಇ-ಇಸ್ಲಾಮಿ ಶಾಸಕ ಹುಮೈರಾ ಖತೂನ್ ಅವರು ಪ್ರಾಂತ್ಯದ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಲಸಿಕೆಗಳ ಕೊರತೆಯ ಬಗ್ಗೆ ಪ್ರಶ್ನಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿದ್ದರಿಂದ ಆಮದು ಸ್ಥಗಿತಗೊಂಡಿದೆ. ಈ ಲಸಿಕೆಗಳನ್ನು ನಾವು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದೇವು ಎಂದು ಹೇಳಿದರು.

ಕಳೆದ ವರ್ಷ ಜುಲೈ 16ರ ವರೆಗೂ ಪಾಕಿಸ್ತಾನವು ಭಾರತದಿಂದ 2.5 ಬಿಲಿಯನ್ ರೂ.ಗಳ ಮೌಲ್ಯದ ರೇಬೀಸ್ ಮತ್ತು ಹಾವಿನ ವಿಷ ನಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡಿತ್ತು.

SCROLL FOR NEXT