ಕುಲಭೂಷನ್ ಜಾದವ್ 
ವಿದೇಶ

ಕುಲ್ ಭೂಷಣ್ ಜಾದವ್ ಪ್ರಕರಣ ವಿಚಾರಣೆಗೆ ವಿಸ್ತೃತ ಪೀಠ ರಚಿಸಿದ ಇಸ್ಲಾಮಾಬಾದ್ ಹೈಕೋರ್ಟ್!

ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲ್ ಭೂಷಣ್ ಜಾದವ್ ಪ್ರಕರಣದಲ್ಲಿ ಭಾರತದ ರಾಜತಾಂತ್ರಿಕ ಒತ್ತಡಗಳಿಗೆ ಪಾಕಿಸ್ತಾನ ತಲೆಬಾಗಿದೆ. ಜಾದವ್ ಅವರಿಗೆ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ಮರು ಪರಿಶೀಲಿಸಲು ಸಾಧ್ಯವಾಗುವಂತೆ ವಿಸ್ತೃತ ನ್ಯಾಯಪೀಠವನ್ನು ಇಸ್ಲಾಮಾಬಾದ್ ಹೈಕೋರ್ಟ್ ರಚಿಸಿದೆ. 

ಇಸ್ಲಾಮಾಬಾದ್: ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲ್ ಭೂಷಣ್ ಜಾದವ್ ಪ್ರಕರಣದಲ್ಲಿ ಭಾರತದ ರಾಜತಾಂತ್ರಿಕ ಒತ್ತಡಗಳಿಗೆ ಪಾಕಿಸ್ತಾನ ತಲೆಬಾಗಿದೆ. ಜಾದವ್ ಅವರಿಗೆ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ಮರು ಪರಿಶೀಲಿಸಲು ಸಾಧ್ಯವಾಗುವಂತೆ ವಿಸ್ತೃತ ನ್ಯಾಯಪೀಠವನ್ನು ಇಸ್ಲಾಮಾಬಾದ್ ಹೈಕೋರ್ಟ್ ರಚಿಸಿದೆ.

ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಅಥರ್ ಮಿನಲ್ಲಾ, ಜಸ್ಟೀಸ್ ಅಮಿರ್ ಫರೂಖ್, ಜಸ್ಟೀಸ್ ಮಿಯಾನ್ ಗುಲ್ ಹಸನ್ ಔರಂಗಜೇಬ್ ಅವನ್ನೊಳಗೊಂಡ ವಿಸ್ತೃತ ನ್ಯಾಯಪೀಠವನ್ನು ರಚಿಸಿರುವುದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿಮಾಡಿವೆ. 
ಈ ಪ್ರಕರಣದ ಬಗ್ಗೆ ನ್ಯಾಯಪೀಠ ಸೆಪ್ಟೆಂಬರ್ ೩ ರಿಂದ ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.

ಕುಲ್ ಭೂಷಣ್ ಜಾದವ್ ಅವರೊಂದಿಗೆ ಮಾತುಕತೆ ನಡೆಸಲು, ಕಾನೂನು ನೆರವು ಪಡೆದುಕೊಳ್ಳಲು ಅಗತ್ಯದ ದೂತಾವಾಸ ಸೌಲಭ್ಯವನ್ನು ಭಾರತ ದೇಶಕ್ಕೆ ಕಲ್ಪಿಸಬೇಕು ಎಂದು ಪಾಕಿಸ್ತಾನ ವಿರುದ್ದ ಭಾರತ ಸರ್ಕಾರ ತೀವ್ರ ಒತ್ತಡ ಹೇರಿದೆ.

ಮತ್ತೊಂದು ಕಡೆ ಇಮ್ರಾನ್ ಖಾನ್ ಸರ್ಕಾರ, ಜಾದವ್ ಪರ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಲು ವಕೀಲರನ್ನು ನೇಮಿಸುವ ವಿಷಯದ ಬಗ್ಗೆ ಭಾರತ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಉತ್ನಿಸುತ್ತಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ ಈ ಪ್ರಕರಣದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಭಾರತ ಸರ್ಕಾರಕ್ಕೆ ಒಂದು ಅವಕಾಶ ಕಲ್ಪಿಸಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಹೇಳಿದೆ ವರದಿ ಮಾಡಿವೆ.

ಜಾದವ್ ಅವರನ್ನು ೨೦೧೬ರಲ್ಲಿ ಬಲೂಚಿಸ್ಥಾನದಲ್ಲಿ ಪಾಕಿಸ್ತಾನ ಪಡೆಗಳು ಅಕ್ರಮವಾಗಿ ಬಂಧಿಸಿವೆ. ಅವರು ಭಯೋತ್ಪಾದನೆ, ಬೇಹುಗಾರಿಕೆಯಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿವೆ. ನಂತರ ಪಾಕಿಸ್ತಾನ ಸೇನಾ ನ್ಯಾಯಾಲಯ ಅವರಿಗೆ ೨೦೧೭ರಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಇದನ್ನು ಭಾರತ ಸರ್ಕಾರ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ಪ್ರಶ್ನಿಸಿದೆ. ಕಳೆದ ವರ್ಷದ ಜುಲೈನಲ್ಲಿ ಐಸಿಜೆ ತೀರ್ಪು ನೀಡಿ, ಜಾದವ್ ಅವರಿಗೆ ವಿಧಿಸಿರುವ ಮರಣ ದಂಡನೆ ಶಿಕ್ಷೆ ಪುನರ್ ಪರಿಶೀಲಿಸಬೇಕು ಎಂದು ಪಾಕಿಸ್ತಾನಕ್ಕೆ ಆದೇಶಿಸಿದೆ. ವಿಯೆನ್ನಾ ಒಪ್ಪಂದವನ್ನು ಪಾಕಿಸ್ಥಾನ ಉಲ್ಲಂಘಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT