ವಿದೇಶ

ಅಮೆರಿಕ ಬಲಿಷ್ಠ ನಾಯಕತ್ವಕ್ಕಾಗಿ ಹಪಹಪಿಸುತ್ತಿದೆ: ಕಮಲಾ ಹ್ಯಾರಿಸ್

Sumana Upadhyaya

ವಾಷಿಂಗ್ಟನ್: ಅಮೆರಿಕ ನಾಯಕತ್ವಕ್ಕಾಗಿ ಅಳುತ್ತಿದೆ ಎಂದು ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಇವರ ಅಭ್ಯರ್ಥಿತನವನ್ನು ಮೊನ್ನೆಯಷ್ಟೇ ಅಧ್ಯಕ್ಷೀಯ ಅಭ್ಯರ್ಥಿ ಜೊ ಬಿಡನ್ ಘೋಷಿಸಿದ್ದರು. ನಿನ್ನೆ ಜೊ ಬಿಡನ್ ಜೊತೆ ಅವರ ತವರು ಪಟ್ಟಣ ದೆಲವಾರೆಯ ವಿಲ್ಮಿಂಗ್ಟವ್ ನಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ಮತ್ತು ಮೈಕ್ ಪೆನ್ಸ್ ಮೇಲೆ ಹಲವು ಕೇಸುಗಳಿದ್ದು ಅವುಗಳೆಲ್ಲವೂ ಮುಚ್ಚಿಹೋಗುತ್ತಿವೆ, ಅಮೆರಿಕಕ್ಕೆ ಬಲಿಷ್ಠ ನಾಯಕತ್ವ ಬೇಕಾಗಿದೆ ಎಂದರು.

ದೇಶ ಪ್ರಮುಖವಾಗಿ ವರ್ಣೀಯ ಸಮಸ್ಯೆಯನ್ನು ಎದುರಿಸುತ್ತಿದೆ. ವರ್ಣಭೇದ ನೀತಿ ಮತ್ತು ವ್ಯವಸ್ಥಿತ ಅನ್ಯಾಯವನ್ನು ನಾವು ಅನುಭವಿಸುತ್ತಿದ್ದೇವೆ. ದೇಶ ಬದಲಾವಣೆಯನ್ನು ಬಯಸುತ್ತಿದೆ ಎಂದರು.

SCROLL FOR NEXT