ವಿದೇಶ

ಭಾರತದೊಂದಿಗೆ ಸಮರ ಎದುರಾದರೆ ಪರಮಾಣು ಯುದ್ಧ ಅನಿವಾರ್ಯ- ಪಾಕಿಸ್ತಾನ ಎಚ್ಚರಿಕೆ 

Nagaraja AB

ಇಸ್ಲಾಮಾಬಾದ್ : ಭಾರತದೊಂದಿಗೆ ಸಮರ ಎದುರಾದರೆ ಅದು  ಸಂಪ್ರದಾಯ ಯುದ್ದವಾಗುವುದಿಲ್ಲ,ಪರಮಾಣು  ಯುದ್ಧ ಅನಿವಾರ್ಯ ಎಂದು  ಪಾಕಿಸ್ತಾನ  ಎಚ್ಚರಿಕೆ  ನೀಡಿದೆ. ತಮ್ಮ ಬಳಿ ಇರುವ  ಶಸ್ತ್ರಾಸ್ತ್ರಗಳು  ಮುಸ್ಲಿಮರನ್ನು  ರಕ್ಷಿಸಲಿವೆ. ನಮ್ಮ ಆಯುಧಗಳು ನಿಖರವಾಗಿ  ಗುರಿ  ಇರಿಸಲಿವೆ  ಎಂದು  ಪಾಕಿಸ್ತಾನದ  ಸಚಿವ ಷೇಕ್  ರಷೀದ್  ಹೇಳಿದ್ದಾರೆ. 

ಪಾಕಿಸ್ತಾನ  ಟಿವಿ ವಾಹಿನಿ  ಸಾಮಗೆ  ನೀಡಿದ  ಸಂದರ್ಶನದಲ್ಲಿ   ಅವರು, ಭಾರತ ಪಾಕಿಸ್ತಾನದ ಮೇಲೆ ದಾಳಿಗಿಳಿದರೆ, ಸಾಂಪ್ರದಾಯಿಕ ಯುದ್ಧಕ್ಕೆ ಅವಕಾಶವಿಲ್ಲ, ಅದು ಭೀಕರ ಪರಮಾಣು ಯುದ್ಧಕ್ಕೆ  ಅವಕಾಶವಾಗಲಿದೆ  ಎಂದು ಹೇಳಿದ್ದಾರೆ.ಚೀನಾ, ರಷ್ಯಾ, ನೇಪಾಳ, ಶ್ರೀಲಂಕಾ ಮತ್ತು ಪಾಕಿಸ್ತಾನ ಈ ಗುಂಪಿನ ರಾಷ್ಟ್ರಗಳಾಗಬಹುದು ಎಂದು ರಷೀದ್ ಭವಿಷ್ಯ ನುಡಿದಿದ್ದಾರೆ.

ಪಾಕಿಸ್ತಾನ ಭಾರತದ ವಿರುದ್ಧ ಪರಮಾಣು ಯುದ್ಧದ ಬೆದರಿಕೆ ಹಾಕುತ್ತಿರುವುದು ಇದೇ ಮೊದಲೇನಲ್ಲಾ, ತನ್ನ ಬಳಿ ಇರುವ ಚಿಕ್ಕ ಸೇನೆ ಭಾರತದ ಸದೃಢ ಸೇನೆಯ ಮುಂದೆ ಸಮ ಅಲ್ಲ ಎಂಬ ವಾಸ್ತವ ಅರಿತಿರುವ ಪಾಕಿಸ್ತಾನ ಆಗಾಗ್ಗೆ ಪರಮಾಣು ಯುದ್ಧದ ಬೆದರಿಕೆ ಹಾಕುತ್ತಾ ಬರುತ್ತಿದೆ.

ಕಳೆದ ವರ್ಷ ಸಂವಿಧಾನದ 370 ವಿಧಿ ರದ್ದುಗೊಂಡ ಬಳಿಕವೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪರಮಾಣು ಯುದ್ಧದ ಬಗ್ಗೆ ಮಾತನಾಡಿದ್ದರು.ಭಾರತದ ಪ್ರದೇಶಗಳ  125ರಿಂದ 250 ಗ್ರಾಮ್ ಅಟಂ ಬಾಂಬ್ ನ್ನು ಹಾಕಲಾಗುವುದು ಎಂದು ಷೇಕ್ ರಷೀದ್ ಹೇಳಿಕೆ ನೀಡಿದ್ದಾಗಿ ಜಿಯೊ ನ್ಯೂಸ್ ವರದಿ ಮಾಡಿತ್ತು.

SCROLL FOR NEXT