ವಿದೇಶ

ತಾಯಿ, ಪತ್ನಿಯ ಭೀಕರ ಕೊಲೆ: ಯುಎಸ್ ನಲ್ಲಿ ಭಾರತದ ಮಾಜಿ ಅಥ್ಲೆಟಿಕ್ ಇಕ್ಬಾಲ್ ಸಿಂಗ್  ಬಂಧನ

Raghavendra Adiga

ವಾಷಿಂಗ್ಟನ್: ಪತ್ನಿ ಮತ್ತು ತಾಯಿಯನ್ನು ಕೊಂದ ಆರೋಪದ ಮೇಲೆ ಭಾರತದ ಮಾಜಿ ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಇಕ್ಬಾಲ್ ಸಿಂಗ್ ಅವರನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ ಎಂದು  ಮಾಧ್ಯಮ ವರದಿಗಳು ತಿಳಿಸಿವೆ.

ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿ ನಿವಾಸಿ ಸಿಂಗ್ (62) ಭಾನುವಾರ ಪೋಲೀಸರ ಮುಂದೆ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಫಿಲಡೆಲ್ಫಿಯಾ ಇಂಕ್ವೈರರ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ನ್ಯೂಟೌನ್ ಟೌನ್‌ಶಿಪ್‌ನಲ್ಲಿರುವ ಸಿಂಗ್ ಅವರ ಮನೆಗೆ ಪೊಲೀಸರು ಬಂದಾಗ, ಸಿಂಗ್ ಸ್ವಯಂ ಪ್ರೇರಿತ ಇರಿತದ ಗಾಯಗಳಿಂದ ಬಳಲುತ್ತಿದ್ದರು. ಒಳಗೆ ಇಬ್ಬರು ಮಹಿಳೆಯರ ಶವಗಳಿದ್ದವು ಎಂದು ವರದಿ ತಿಳಿಸಿದೆ.

ಸಿಂಗ್ ಅವರ ಅಪರಾಧಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ನಿರಾಕರಿಸಲಾಗಿದೆ.ಅವರು ವಕೀಲರನ್ನು ನೇಮಿಸಿಕೊಂಡಿದ್ದಾರೆಂಬುದಕ್ಕೆ ಯಾವ ಮಾಹಿತಿ ಇಲ್ಲ. 

ಕುವೈತ್‌ನಲ್ಲಿ ನಡೆದ 1983 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ಶಾಟ್-ಪೂಟ್ ಆಟಗಾರ  ಸಿಂಗ್  ಕಂಚಿನ ಪದಕ ಜಯಿಸಿದ್ದರು.

ಅವರು ಯುಎಸ್ ಗೆ ತೆರಳುವ ಮೊದಲು ಇದು ಅವರ ಕ್ರೀಡಾ ವೃತ್ತಿಜೀವನದ ಅತಿದೊಡ್ಡ ಸಾಧನೆಯಾಗಿತ್ತು.ಟ್ಯಾಕ್ಸಿಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸಿಂಗ್ ತಾಯಿ ನಾಸಿಬ್‌ ಕೌರ್,  ಪತ್ನಿ ಜಸ್ಪಾಲ್ ಕೌರ್  ಜತೆ ವಾಸವಿದ್ದರು. 

ಇದೀಗ ಇಬ್ಬರನ್ನೂ ಹತ್ಯೆ ಮಾಡಿರುವ ಸಿಂಗ್ ಅವರ ಕೃತ್ಯದ ಹಿಂದಿನ ಉದ್ದೇಶ ಸ್ಪಷ್ತವಾಗಿಲ್ಲ.

SCROLL FOR NEXT