ವಿದೇಶ

ಚೀನಾ ಪೋರ್ಟ್ ಒಪ್ಪಂದ ಪ್ರಮಾದ, 'ಭಾರತವೇ ಮೊದಲು' ನೀತಿ ಮುಂದುವರಿಕೆ: ಶ್ರೀಲಂಕಾ 

Srinivas Rao BV

ಕೊಲಂಬೋ: ಶ್ರೀಲಂಕಾದ ಹ್ಯಾಂಬಂಟೊಟ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು 99 ವರ್ಷಗಳ ಕಾಲ ಚೀನಾಗೆ ನೀಡಿದ್ದು ತಪ್ಪಾಯ್ತು, ನಾವು ಭಾರತದ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರಲು ಸಾಧ್ಯವಿಲ್ಲ, ಭಾರತವೇ ಮೊದಲು ಎಂಬ ನೀತಿಯನ್ನು ಮುಂದುವರೆಸುವುದಾಗಿ ಶ್ರೀಲಂಕಾ ಹೇಳಿದೆ. 

ವಿದೇಶಾಂಗ ವ್ಯವಹಾರಗಳಲ್ಲಿ ಚೀನಾದತ್ತ ಹೆಚ್ಚು ಮುಖ ಮಾಡಿದ್ದ ಶ್ರೀಲಂಕಾ ಈಗ ತಟಸ್ಥ ನೀತಿ ಅನುಸರಿಸಿ ಕಾರ್ಯತಂತ್ರ, ಭದ್ರತಾ ವಿಷಯಗಳಲ್ಲಿ ಭಾರತಕ್ಕೆ ಅಪಾಯಕಾರಿಯಾಗಿರುವುದಕ್ಕೆ ಸಾಧ್ಯವಿಲ್ಲ ಹಾಗೂ ಇರಲೂಬಾರದು ಎಂದು ಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸಹೇಳಿರುವುದಾಗಿ ಶ್ರೀಲಂಕಾ ಟಿವಿ ಚಾನೆಲ್ ನೊಂದಿಗೆ ಮಾತನಾಡಿರುವ ಲಂಕಾದ ವಿದೇಶಾಂಗ ಕಾರ್ಯದರ್ಶಿ ಜಯಂತ್ ಕೊಲಂಬೇಜ್ ಹೇಳಿದ್ದಾರೆ.

ಭದ್ರತಾ ವಿಷಯದಲ್ಲಿ ಭಾರತವೇ ನಮಗೆ ಮೊದಲು, ಆದರೆ ದೇಶದ ಆರ್ಥಿಕ ಸಂವೃದ್ಧಿಯ ದೃಷ್ಟಿಯಿಂದಾಗಿ ನಾವು ಬೇರೆ ವಿಷಯಗಳಲ್ಲಿ ತಟಸ್ಥರಾಗಿರಬೇಕಾಗುತ್ತದೆ. ವಿದೇಶಾಂಗ ನೀತಿಗಳಲ್ಲಿ ತಟಸ್ಥವಾಗಿರುವುದರ ಜೊತೆಗೆ ಭಾರತದ ಕಾರ್ಯತಂತ್ರ ಭದ್ರತಾ ಹಿತಾಸಕ್ತಿಯನ್ನು ಶ್ರೀಲಂಕಾ ಬೆಂಬಲಿಸಿ,  ರಕ್ಷಿಸುತ್ತದೆ ಎಂದು ಅಧ್ಯಕ್ಷರು ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ. 
ಇದೇ ವೇಳೆ ಹ್ಯಾಂಬಂಟೊಟ ಬಂದರನ್ನು ಚೀನಾಗೆ 99 ವರ್ಷಗಳ ಕಾಲ ಗುತ್ತಿಗೆ ನೀಡಿರುವುದು ತಪ್ಪಾಗಿದೆ ಎಂದೂಶ್ರೀಲಂಕಾ ಹೇಳಿರುವುದು ಮಹತ್ವ ಪಡೆದುಕೊಂಡಿದೆ. 

ಶ್ರೀಲಂಕಾದಲ್ಲಿ ರಾಜಪಕ್ಸ ಅವರ ಆಡಳಿತ ದೀರ್ಘಾವಧಿಯಿಂದ ಚೀನಾದ ಜೊತೆ ಹೆಜ್ಜೆ ಹಾಕಲಿದೆ ಎಂದೇ ಗುರುತಿಸಿಕೊಳ್ಳುತ್ತಿತ್ತು, ಆದರೆ ಇತ್ತೀಗಷ್ಟೇ ಎರಡನೇ ಬಾರಿ ರಾಜಪಕ್ಸ ಸರ್ಕಾರ ಲಂಕಾದ ಆಡಳಿತ ಚುಕ್ಕಾಣಿ ಹಿಡಿದ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್ ಜೈಶಂಕರ್ ಲಂಕಾ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿ, ಭಾರತದೊಂದಿಗಿನ ಲಂಕಾ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದರು. 

SCROLL FOR NEXT