ವಿದೇಶ

ದಕ್ಷಿಣ ಚೀನಾ ಸಮುದ್ರದಲ್ಲಿ ಮೆರೆಯುತ್ತಿರುವ ಚೀನಾಗೆ ಅಮೆರಿಕಾದಿಂದ ಮರ್ಮಾಘಾತ!

Srinivas Rao BV

ವಾಷಿಂಗ್ ಟನ್: ದಕ್ಷಿಣ ಚೀನಾ ಸಮುದ್ರದಲ್ಲಿ ಮೆರೆಯುತ್ತಿರುವ ಚೀನಾಗೆ ಅಮೆರಿಕಾ ಭರ್ಜರಿ ಹೊಡೆತವನ್ನೇ ನೀಡಿದೆ.

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕು ಸ್ಥಾಪನೆ ಹಾಗೂ ಮಿಲಿಟರೀಕರಣದಲ್ಲಿ ತೊಡಗಿಸಿಕೊಂಡಿದ್ದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಅಧಿಕಾರಿಗಳಿಗೆ ಅಮೆರಿಕ ವೀಸಾ ನಿರ್ಬಂಧ ವಿಧಿಸಿದೆ. 

ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯೋ ವಿವಾದಿತ ದಕ್ಷಿಣ ಚೀನಾ ಸಮುದ್ರದದ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ಮಿಲಿಟರೀಕರಣದಲ್ಲಿ ತೊಡಗಿಕೊಂಡಿರುವ, ತೊಡಕಾಗಿರುವ, ಅಥವಾ ಸಮುದ್ರದ ಮೇಲೆ ಹಕ್ಕು ಪ್ರತಿಪಾದನೆ ಮಾಡುತ್ತಿರುವ ಆಗ್ನೇಯ ಏಷ್ಯಾದವರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಪಿಆರ್ ಸಿ ಹಾಗೂ ಪಿಎಲ್ಎ ಸಿಬ್ಬಂದಿಗಳು, ಖಾಸಗಿ ವ್ಯಕ್ತಿಗಳಿಗೆ ಅಮೆರಿಕ ವೀಸಾವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ. 

ಈ ಕ್ರಮದಿಂದಾಗಿ ವೀಸಾ ನಿರ್ಬಂಧಕ್ಕೊಳಗಾದ ವ್ಯಕ್ತಿಗಳಿಗೆ ಅಮೆರಿಕ ಪ್ರವೇಶಿಸುವುದಕ್ಕೆ ಸಾಧ್ಯವಿರುವುದಿಲ್ಲ. ನಿರ್ಬಂಧಕ್ಕೊಳಗಾದ ವ್ಯಕ್ತಿಗಳ ಕುಟುಂಬ ಸದಸ್ಯರ ವೀಸಾಗಳು ಸಹ ವೀಸಾ ನಿರ್ಬಂಧಗಳಿಗೆ ಒಳಪಡಬೇಕಾಗುತ್ತದೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ. ಇವಿಷ್ಟೇ ಅಲ್ಲದೇ ಅಮೆರಿಕದ ವಾಣಿಜ್ಯ ಇಲಾಖೆ ಪಿಆರ್ ಸಿ ಯ ಸರ್ಕಾರಿ ಸ್ವಾಮ್ಯದ 24 ಸಂಸ್ಥೆಗಳನ್ನು Entity List ಗೆ ಸೇರಿಸಿದ್ದು, ಈ ಪೈಕಿ ಚೀನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಕಂಪನಿಗಳೂ ಸೇರ್ಪಡೆಯಾಗಿವೆ. 

SCROLL FOR NEXT