ವಿದೇಶ

ಫ್ರೆಂಚ್ ಮಾಜಿ ಅಧ್ಯಕ್ಷ ವ್ಯಾಲೆರಿ ಗಿಸ್ಕಾರ್ಡ್ ನಿಧನ

Manjula VN

ಪ್ಯಾರಿಸ್: ಯುರೋಪಿಯನ್ ಏಕೀಕರಣದ ವಾಸ್ತುಶಿಲ್ಪಿಗಳಲ್ಲಿ ಪ್ರಮುಖರಾಗಿ, ಸಾಮಾನ್ಯವಾಗಿ ವಿಜಿಇ ಎಂದು ಕರೆಯುತ್ತಿದ್ದ , ಫ್ರೆಂಚ್ ಮಾಜಿ ಅಧ್ಯಕ್ಷ , ವ್ಯಾಲೆರಿ ಗಿಸ್ಕಾರ್ಡ್ ದೀರ್ಘ ಅನಾರೋಗ್ಯದ ಕಾರಣ ನಿಧನ ರಾಗಿದ್ದಾರೆ ಅವರಿಗೆ 94 ವರ್ಷ ವಯಸ್ಸಾಗಿತ್ತು.

ಅವರ ಆರೋಗ್ಯವು ಹದಗೆಟ್ಟ ನಂತರ ಫ್ರಾನ್ಸ್‌ನ ಲೋಯಿರ್-ಎಟ್-ಚೆರ್‌ನಲ್ಲಿರುವ ಅವರ ಮನೆಯಲ್ಲೆ ಅವರು ನಿಧನರಾದರು ಎಂದು ಫೊಂಡೇಶನ್ ವ್ಯಾಲೆರಿ ಗಿಸ್ಕಾರ್ಡ್ ಡಿ’ಸ್ಟೇಯಿಂಗ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಮಾಜಿ ಅಧ್ಯಕ್ಷರು ಉಸಿರಾಟದ ತೊಂದರೆಗಳಿಂದ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ಯಾರಿಸ್ ನಲ್ಲಿ ಮತ್ತೊಬ್ಬ ಮಾಜಿ ಅಧ್ಯಕ್ಷ ಜಾಕ್ವೆಸ್ ಚಿರಾಕ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಕೊನೆಯ ಭಾರಿ ಕಾಣಿಸಿಕೊಂಡಿದ್ದರು. 1974 ರಿಂದ 1981 ರವರೆಗೆ ಫ್ರಾನ್ಸ್‌ನ ನಾಯಕರಾಗಿದ್ದ ಗಿಸ್ಕಾರ್ಡ್, ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನಕ್ಕೆ ಅವಕಾಶ ನೀಡುವುದು ಮತ್ತು ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ಯುರೋಪಿಯನ್ ಏಕೀಕರಣದ ವಾಸ್ತುಶಿಲ್ಪಿಗಳಲ್ಲಿ ಪ್ರಮುಖರಾಗಿದ್ದರು , ಕೇವಲ 48 ನೇ ವಯಸ್ಸಿನಲ್ಲಿ ದೇಶದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.

SCROLL FOR NEXT