ವಿದೇಶ

ಚೀನಾ ಮೂಲದ ಕೋವಿಡ್ ವ್ಯಾಕ್ಸಿನ್ ಗೆ 'ಹಲಾಲ್'‌ ಪ್ರಮಾಣೀಕರಣ ಕೇಳಿದ ಇಂಡೋನೇಷ್ಯಾ!

Srinivasamurthy VN

ಜಕಾರ್ತಾ: ಚೀನಾ ಮೂಲದ ಕೋವಿಡ್ ಲಸಿಕೆಗೆ ಇಂಡೋನೇಷ್ಯಾ 'ಹಲಾಲ್'‌ ಪ್ರಮಾಣೀಕರಣ ಕೇಳಿದೆ.

ಹೌದು.. ಇಂಡೊನೇಷ್ಯಾದ ಉನ್ನತ ಮುಸ್ಲಿಂ ಧಾರ್ಮಿಕ ಸಂಸ್ಥೆಯು ಚೀನಾ ಮೂಲದ ಸೈನೋವಾಕ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಕೋವಿಡ್‌ ಲಸಿಕೆಗೆ ಹಲಾಲ್‌ ಪ್ರಮಾಣೀಕರಣವನ್ನು ನೀಡುವಂತೆ ಇಂಡೋನೇಷ್ಯಾದ ಅತ್ಯುನ್ನತ ಮುಸ್ಲಿಂ ಕ್ಲೆರಿಕಲ್ ಸಂಸ್ಥೆ  ಕೇಳಿದೆ. ಇಂಡೊನೇಷ್ಯಾದಲ್ಲಿ ಲಸಿಕೆ ಬಳಕೆಗೆ ಅನುಮೋದನೆ ಪಡೆಯಬೇಕಾದರೆ ಈ ಪ್ರಮಾಣೀಕರಣ ಅಗತ್ಯ. 

ಈ ಬಗ್ಗೆ ಮಾಹಿತಿ ನೀಡಿರುವ ಇಂಡೋನೇಷ್ಯಾದ ಮಾನವ ಅಭಿವೃದ್ಧಿ ಮತ್ತು ಸಂಸ್ಕೃತಿ ಸಚಿವ ಮುಹಾಜಿರ್ ಎಫೆಂಡಿ ಅವರು, 'ಇಂಡೋನೇಷ್ಯಾದ ಉಲೆಮಾ ಕೌನ್ಸಿಲ್, ಹಲಾಲ್ ಉತ್ಪನ್ನ ಖಾತರಿ ಸಂಸ್ಥೆಯು ಫತ್ವಾ ಮತ್ತು ಹಲಾಲ್ ಪ್ರಮಾಣೀಕರಣಕ್ಕಾಗಿ ಬೇಕಾದ ಎಲ್ಲಾ ದಾಖಲೆಗಳನ್ನು  ಸಿದ್ದಪಡಿಸಿ ಸಮಿತಿಗೆ ಸಲ್ಲಿಸಿದೆ. ಸೈನೋವಾಕ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಕೋವಿಡ್‌ ಲಸಿಕೆಯ 10 ಲಕ್ಷ ಡೋಸ್‌ ಭಾನುವಾರ ಇಂಡೋನೇಷ್ಯಾಗೆ ಬಂದಿಳಿದಿದ್ದು, ಈವರೆಗೆ ಸರ್ಕಾರ ಲಸಿಕೆ ವಿತರಣೆ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಟೆರಾವಾನ್ ಅಗಸ್ ಪುತ್ರಾಂಟೊ ಅವರು ಮಾತನಾಡಿ 'ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗದಲ್ಲಿ ಸಫಲತೆ ಸಿಕ್ಕ ಬಳಿಕವೇ ಪ್ರಜೆಗಳಿಗೆ ಪ್ರಾಯೋಗಿಕ ಲಸಿಕೆಯನ್ನು ವಿತರಿಸಲಾಗುವುದು. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಅಡಿಯಲ್ಲಿ ಮೂರು ಕ್ಲಿನಿಕಲ್‌  ಟ್ರಯಲ್‌ಗಳಲ್ಲಿ ಸುರಕ್ಷಿತವೆಂದು ಸಾಬೀತಾದ ಲಸಿಕೆಯನ್ನು ಮಾತ್ರ ಜನರಿಗೆ ನೀಡಲಾಗುತ್ತದೆ ಎಂದು ಹೇಳಿದರು.
 

SCROLL FOR NEXT