ವಿದೇಶ

ಜಾರ್ಜ್ ಫ್ಲಾಯ್ಡ್ ಹತ್ಯೆ: ಪ್ರತಿಭಟನಾಕಾರರಿಗೆ ಆಶ್ರಯ ನೀಡಿದ್ದ ರಾಹುಲ್ ದುಬೆ ಟೈಮ್‌ನ ವರ್ಷದ ಹೀರೋ!

Raghavendra Adiga

ನವದೆಹಲಿ: ಜಾರ್ಜ್ ಫ್ಲಾಯ್ಡ್ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದ 70 ಕ್ಕೂ ಹೆಚ್ಚು ಜನರಿಗೆ ತನ್ನ ವಾಷಿಂಗ್ ಟನ್ ಡಿಸಿ ಮನೆಯಲ್ಲಿ ಆಶ್ರಯ ನೀಡಿದ್ದ ಭಾರತೀಯ-ಅಮೇರಿಕನ್ ರಾಹುಲ್ ದುಬೆ ಟೈಮ್ ನಿಯತಕಾಲಿಕೆಯು "ಹೀರೋಸ್ ಆಫ್ 2020”  ಪ್ರಶಂಸೆಗೆ ಪಾತ್ರವಾಗಿದ್ದಾರೆ.

"ಹೀರೋಸ್ ಆಫ್  2020"ನಲ್ಲಿ, ಆಸ್ಟ್ರೇಲಿಯಾದ ಸ್ವಯಂಸೇವಕ ಅಗ್ನಿಶಾಮಕ ದಳದ ಸಿಬ್ಬಂದಿ, ಫುಡ್ ಶಾಪ್ ನ ಮಾಲೀಕರಾದ ಜೇಸನ್ ಚುವಾ ಮತ್ತು ಸಿಂಗಾಪುರದ ಹಂಗ್ ಝಿಂಗ್ಲಾಂಗ್, , ಪಾಸ್ಟರ್ ರೆಶೋರ್ನಾ ಫಿಟ್ಜ್‌ಪ್ಯಾಟ್ರಿಕ್ ಮತ್ತು ಅವರ ಪತಿ ಚಿಕಾಗೋದ ಬಿಷಪ್ ಡೆರಿಕ್ ಫಿಟ್ಜ್‌ಪ್ಯಾಟ್ರಿಕ್, ವೃತ್ತಪತ್ರಿಕೆ ಡೆಲಿವರಿಮ್ಯಾನ್ ಗ್ರೆಗ್ ಡೈಲಿ, ಸೇರಿ ಹಲವರು ಇದ್ದಾರೆ. 

ಇದೇ ವೇಳೆ ರಾಹುಲ್ ದುಬೆ ಅವರನ್ನು ಟೈಮ್ಸ್ "ಅಗತ್ಯವಿರುವವರಿಗೆ ಆಶ್ರಯ ನೀಡಿದ ವ್ಯಕ್ತಿ" ಎಂದು ಬಣ್ಣಿಸಿದೆ.

ಜೂನ್ 1 ರಂದು, ಆಫ್ರಿಕನ್-ಅಮೇರಿಕನ್ ಫ್ಲಾಯ್ಡ್ ಹತ್ಯೆಯನ್ನು ಪ್ರತಿಭಟಿಸಲು ಪ್ರತಿಭಟನಾಕಾರರು ವಾಷಿಂಗ್ಟನ್ ಡಿಸಿಯ ಬೀದಿಗಳಲ್ಲಿ ತುಂಬುತ್ತಿದ್ದ ವೇಳೆ ದುಬೆ ಶ್ವೇತಭವನದಿಂದ ದೂರದಲ್ಲಿರಲಿಲ್ಲ. ಸಂಜೆ 7 ಗಂಟೆಯ ಕರ್ಫ್ಯೂ ನಂತರ, "ರಸ್ತೆಯಲ್ಲಿ ಜನಸಂದಣಿಯನ್ನುಚದುರಿಸಲು  ಪೊಲೀಸರು ಪ್ರತಿಭಟನಾಕಾರರನ್ನು ದಂಡಿಸುತ್ತಿದ್ದರು.  ಆ ಸಮಯ ದುಬೆ ಕಾರ್ಯತತ್ಪರರಾದರು.

"ನಾನು ನನ್ನ ಬಾಗಿಲು ತೆರೆಯುತ್ತೇನೆ, ಮತ್ತುಮನೆಯೊಳಗೆ ತೆರಳಲು ಅವಕಾಶ ನೀಡುತ್ತೇನೆ. "ಎಂದು ಕೂಗಲು ಪ್ರಾರಂಭಿಸಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದುಬೆ ಕರ್ಫ್ಯೂ ಉಲ್ಲಂಘನೆಯನ್ನು ತಪ್ಪಿಸಲು ಸುಮಾರು 70 ಪ್ರತಿಭಟನಾಕಾರರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದರು, ರಾತ್ರಿಯಿಡೀ ಅವರು ದುಬೆ ಮನೆಯಲ್ಲಿದ್ದರು. 

"ಜನರು ಕೆಮ್ಮುತ್ತಿದ್ದರು, ಅಳುತ್ತಿದ್ದರು, ಅಪರಿಚಿತರು ನರಳಾಡುತ್ತಿದ್ದರು.ಕೆಲವರು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು, ಜಾಮೀನುದಾರರ ಫೋನ್ ಸಂಖ್ಯೆ ಬರೆದುಕೊಳ್ಳುತ್ತಿದ್ದರು, ಇದೇ ನಿಜವಾದ ಸೌಹಾರ್ದ. " ಆ ದಿನ ಸಂಜೆ ತನ್ನ ಕರ್ಫ್ಯೂ ಉಲ್ಲಂಘಿಸಿ ದುಬೆ ಮನೆಗೆ ಪ್ರತಿಭಟನಾಕಾರರು ನುಗ್ಗುವುದನ್ನು ತಡೆಯಲು ಪೋಲೀಸರು ಅನೇಕ ಬಾರಿ ಪ್ರಯತ್ನಿಸಿದ್ದಾರೆ, ಎಂದು ಟೈಮ್‌ನ ವರದಿಯೊಂದು ಹೇಳಿದೆ: ಪ್ರತಿಭಟನಾಕಾರರು ಒಳಗೆ ಹೋಗಲು ಪ್ರಯತ್ನಿಸುತ್ತಿರುವುದು ಮತ್ತು ತನ್ನ ಮನೆಯ ಅತಿಥಿಗಳಿಗಾಗಿ ಅವರು ಆದೇಶಿಸಿದ್ದ ಪಿಜ್ಜಾ ವಿತರಣೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ.

ಅವರ ಕೃತ್ಯಕ್ಕಾಗಿ, ದುಬೆ ಅವರ ಮನೆಯಲ್ಲಿ ಆಶ್ರಯ ಪಡೆದವರು ಅದರ ಬಗ್ಗೆ ಟ್ವೀಟ್ ಮಾಡಲು ಪ್ರಾರಂಭಿಸಿದ್ದರಿಂದ ಅವರನ್ನು ಹೀರೋ, ಸಂರಕ್ಷಕ ಎಂದು ಪ್ರಶಂಸಿಸಲಾಯಿತು."ರಾಹುಲ್ ದುಬೆ ಕಳೆದ ರಾತ್ರಿ ನನ್ನ ಜೀವ ಉಳಿಸಿದ್ದಾರೆ" ಎಂದು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಕಾರ್ಯಕರ್ತರೊಬ್ಬರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

“ನನ್ನ ಕಣ್ಣುಗಳ ಮುಂದೆ ಏನು ನಡೆಯುತ್ತಿದೆ ಎಂದು ನೀವು ನೋಡಿದ್ದರೆ, ಬೇರೆ ಆಯ್ಕೆ ಇರಲಿಲ್ಲ. ಜನರು ಮೆಣಸು ಸಿಂಪಡಿಸಿ ಹೊಡೆಯುತ್ತಿದ್ದರು"ದುಬೆ  ರು ಮಾಧ್ಯಮಗಳಿಗೆ ತಿಳಿಸಿದ್ದರು.

46 ರ ಹರೆಯದ ಫ್ಲಾಯ್ಡ್ ಮೇ 25 ರಂದು ಮಿನ್ನಿಯಾಪೋಲಿಸ್‌ನಲ್ಲಿ ಮೃತಪಟ್ಟರು, ಬಿಳಿ ಪೊಲೀಸ್ ಅಧಿಕಾರಿಯೊಬ್ಬರು ಅವನ ಹತ್ಯೆಗೆ ಕಾರಣವಾಗಿದ್ದ.  ವೈರಲ್ ಆದ ಈ ವಿಡಿಯೋದಲ್ಲಿ , ಫ್ಲಾಯ್ಡ್ ಉಸಿರಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಂದಿಗೆ ಮನವಿ ಮಾಡಿಕೊಳ್ಳುತ್ತ್ತಿದ್ದ. ಇದನ್ನ ನೋಡಿದ ನಂತರ ಈ ಸಂಬಂಧ ನಾಲ್ವರು ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಹಿರಿಸಲಾಗಿತ್ತು. ಅವರ ಸಾವು ರಾಷ್ಟ್ರವ್ಯಾಪಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಯಿತು, ಪ್ರತಿಭಟನಾಕಾರರಲ್ಲಿ ಒಂದು ಗುಂಪು ದೇಶಾದ್ಯಂತ ಲೂಟಿ ಮತ್ತು ಗಲಭೆಗಳನ್ನು ಸೃಷ್ಟಿಸಿ ವಿನಾಶದ ಹಾದಿ ತುಳಿದಿತ್ತು.

SCROLL FOR NEXT