ವಿದೇಶ

ವಿಶ್ವದಾದ್ಯಂತದ ಕೊರೊನಾ ಪ್ರಕರಣಗಳ ಸಂಖ್ಯೆ 70 ದಶಲಕ್ಷ!

Manjula VN

ವಾಷಿಂಗ್ಟನ್: ಜಗತ್ತಿನಾದ್ಯಂತ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 70 ದಶಲಕ್ಷಗಳ ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.

ಶುಕ್ರವಾರ ಸ್ಥಳೀಯ ಕಾಲಮಾನ 21 ಗಂಟೆ ವೇಳೆಗೆ ಕೊರೊನಾ ವೈರಸ್ ಪ್ರಕರಣಗಳ ನಿಖರ ಸಂಖ್ಯೆ 70,000,538 ರಷ್ಟಿದ್ದು, 1.58 ದಶಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಮಾರ್ಚ್ 11ರಂದು ಘೋಷಿಸಿತ್ತು. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಮಹಾಮಾರಿ ಕೊರೋನಾ ವೈರಸ್ ಅಮೆರಿಕಾ, ಭಾರತ ಹಾಗೂ ಬ್ರೆಜಿಲ್ ರಾಷ್ಟ್ರಗಳಲ್ಲಿ ಆರ್ಭಟಿಸುತ್ತಲೇ ಇದೆ. 

ಪ್ರಮುಖವಾಗಿ ಅಮೆರಿಕಾ ರಾಷ್ಟ್ರದಲ್ಲಿ ಕೊರೋನಾ ಮಟ್ಟಹಾಕುವುದು ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ಅಮೆರಿಕಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,295,714ಕ್ಕೆ ಏರಿಕೆಯಾಗಿದೆ. ಅಲ್ಲದೆ. ಸಾವಿನ ಸಂಖ್ಯೆ ಕೂಡ 302,762ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ. 

SCROLL FOR NEXT