ವಿದೇಶ

ತಾಂತ್ರಿಕ ದೋಷ: ಜಗತ್ತಿನಾದ್ಯಂತ ಜಿ-ಮೇಲ್‌, ಯುಟ್ಯೂಬ್‌ ಸೇರಿದಂತೆ ಗೂಗಲ್‌ ಸೇವೆಗಳಲ್ಲಿ ವ್ಯತ್ಯಯ!

Srinivasamurthy VN

ವಾಷಿಂಗ್ಟನ್: ಜಗತ್ತಿನಾದ್ಯಂತ ಜಿ-ಮೇಲ್‌, ಯುಟ್ಯೂಬ್‌ ಸೇರಿದಂತೆ ಗೂಗಲ್‌ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ.

ಜಗತ್ತಿನಾದ್ಯಂತ ಗೂಗಲ್‌ನ ಬಹುತೇಕ ಸೇವೆಗಳಲ್ಲಿ ಅಡಚಣೆ ಎದುರಾಗಿದ್ದು, ಜಿಮೇಲ್‌, ಯುಟ್ಯೂಬ್‌, ಮ್ಯಾಪ್ಸ್‌ ಹಾಗೂ ಡ್ರೈವ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಸಂಜೆ 5 ಗಂಟೆಯಿಂದ ಗೂಗಲ್‌ನ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿದ್ದು, ಬಹುತೇಕ ಬಳಕೆದಾರರಿಗೆ ಜಿಮೇಲ್‌  ಮತ್ತು ಯುಟ್ಯೂಬ್‌ ತೆರೆಯಲು ಸಾಧ್ಯವಾಗುತ್ತಿಲ್ಲ. ಯುಟ್ಯೂಬ್‌ ತೆರೆಯಲು ಪ್ರಯತ್ನಿಸಿದರೆ, 'ಏನೋ ಸಮಸ್ಯೆಯಾಗಿದೆ' (Something went wrong) ಎಂಬ ಸಂದೇಶ ತೋರುತ್ತಿದೆ. ಜಿಮೇಲ್‌ ತಾತ್ಕಾಲಿಕವಾಗಿ ವ್ಯತ್ಯಯವೆಂದು (Temporary Error) ಪರದೆ ಮೇಲೆ  ಸಂದೇಶ ಬರುತ್ತಿದೆ.

ಭಾರತವೂ ಸೇರಿದಂತೆ ಜಪಾನ್‌, ಯುರೋಪ್‌ ಹಾಗೂ ಅಮೆರಿಕದ ಕೆಲವು ಭಾಗಗಳಲ್ಲಿ ಗೂಗಲ್‌ ಸೇವೆಗಳಿಗೆ ಅಡಚಣೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಗೂಗಲ್ ನ ಸಹೋದರ ಸಂಸ್ಥೆಯಾದ ಯೂಟ್ಯೂಬ್, ಅಡಚಣೆಗಾಗಿ ವಿಷಾಧಿಸುತ್ತೇವೆ ಎಂದು ಟ್ವೀಟ್ ಮಾಡಿದೆ. 

ಇನ್ನು ಈ ಬಗ್ಗೆ ಹಲವು ಬಳಕೆದಾರರು ಕೂಡ ಪ್ರತಿಕ್ರಿಯೆ ನೀಡಿದ್ದು, ಗೂಗಲ್ ಸೇವೆಗಳಲ್ಲಿ ವ್ಯತ್ಯವಾಗಿದ್ದರೂ ಗೂಗಲ್‌ ಕ್ರೋಮ್‌ನ ಇನ್‌ಕಾಗ್ನಿಟೊ ಮೋಡ್‌ನಲ್ಲಿ ( INCOGNITO) ಯುಟ್ಯೂಬ್‌ ಬಳಸಬಹುದಾಗಿದೆ ಎಂದು ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

SCROLL FOR NEXT