ವಿದೇಶ

ಕೆನಡಾದಲ್ಲಿ ಬಲೂಚ್ ಹೋರಾಟಗಾರ್ತಿ ಕರೀಮಾ ಬಲೂಚ್ ನಿಗೂಢ ಸಾವು

Srinivas Rao BV

ಪಾಕಿಸ್ತಾನವನ್ನು ತ್ಯಜಿಸಿ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಮಹಿಳೆ ಕರೀಮಾ ಬಲೂಚ್ ಕೆನಡಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 

2016 ರಲ್ಲಿ ಇವರು ಪಾಕಿಸ್ತಾನವನ್ನು ತೊರೆದು ಕೆನಡಾದಲ್ಲಿ ಆಶ್ರಯ ಪಡೆದಿದ್ದರು.  ಕೆನಡಾದ ಹಾರ್ಬರ್ ಫ್ರಂಟ್ ನಲ್ಲಿ ಆಕೆ ಮೃತಪಟ್ಟಿರುವುದು ವರದಿಯಾಗಿದೆ. 

ಸ್ಥಳೀಯ ಮಾಹಿತಿಯ ಪ್ರಕಾರ, ಟೊರೋಂಟೋ ಲೇಕ್ ಶೋರ್ ನ ಬಳಿಯಲ್ಲಿರುವ ದ್ವೀಪದಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತ ದೇಹ ಪೊಲೀಸರ ವಶದಲ್ಲಿಯೇ ಇದ್ದು, ಮಹಿಳೆ ಕರೀಮಾ ಬಲೂಚ್ ಅವರ ಪತಿ ಹಮ್ಮಾಲ್ ಹೈದರ್ ಹಾಗೂ ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿರುವ ಟೊರೊಂಟೋದ ಹಿರಿಯ ಪತ್ರಕರ್ತ ತಾರೇಕ್ ಫತಾಹ್ "ಟೊರೊಂಟೊ ಪೊಲೀಸರು ಹಾಗೂ ಕೆನಡಾದ ಭದ್ರತಾ ಏಜೆನ್ಸಿ ಸಿಎಸ್ಐಎಸ್ ಕರೀಮಾ ಬಲೂಚ್ ಸಾವಿನ ಹಿಂದೆ ಪಾಕಿಸ್ತಾನದ ಕೈವಾಡ ಇರುವುದರ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 

SCROLL FOR NEXT