ವಿದೇಶ

ಬ್ರೆಜಿಲ್ ಉಪಾಧ್ಯಕ್ಷರಿಗೂ ಕೊರೋನಾ ಪಾಸಿಟಿವ್!

Manjula VN

ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷರ ನಂತರ ಬ್ರೆಜಿಲ್‌ ದೇಶದ ಉಪಾಧ್ಯಕ್ಷ ಹ್ಯಾಮಿಲ್ಟನ್ ಮೌರಾವ್ ಅವರಿಗೂ ಕೊರೋನ ಸೋಂಕು ಅಮರಿಕೊಂಡಿದೆ.

ಅವರು ಕೊರೋನ ಪರೀಕ್ಷೆಗೆ ಒಳಗಾಗಿದ್ದು ಸೋಂಕು ಇರುವುದು ವೈದ್ಯಕೀಯ ವರದಿಗಳಿಂದ ಖಚಿತವಾಗಿದೆ. ಸದ್ಯ ಅವರು ಸ್ವಯಂ ಪ್ರತ್ಯೇಕವಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೌರಾವ್ ಭಾನುವಾರ ಮಧ್ಯಾಹ್ನ ಸೋಂಕು ಪರೀಕ್ಷೆ ಗೆ ಒಳಗಾಗಿದ್ದಾರೆ . ಅವರ ಅಧಿಕೃತ ನಿವಾಸವಾದ ಜಬೀರು ಅರಮನೆಯಲ್ಲಿ ಪ್ರತ್ಯೇಕವಾಗಿ ಉಳಿದಿದ್ದಾರೆ ಎಂದು ಉಪಾಧ್ಯಕ್ಷರ ಕಚೇರಿ ಸೋಮವಾರ ದಿ ವೆಸ್ಟ್ ಆಸ್ಟ್ರೇಲಿಯಾ ಉಲ್ಲೇಖಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಕಳದೆ ಜುಲೈನಲ್ಲಿ ಕರೋನ ಸೋಂಕು ತಗುಲಿತ್ತು ಒಂದೆರಡು ವಾರಗಳವರೆಗೆ ಸಂಪರ್ಕತಡೆ ಹೊಂದಿದ್ದ ನಂತರ, ಬಲಪಂಥೀಯ ಅಧ್ಯಕ್ಷರು - ಮುಖವಾಡ ಧರಿಸುವ ನಿಯಮಗಳನ್ನು ಆಗಾಗ್ಗೆ ಧಿಕ್ಕರಿಸಿ, ಕೆಲಸಕ್ಕೆ ಮರಳಿದ ಪರಿಣಾಮ ಬ್ರೆಜಿಲ್ ಅನೇಕ ಹಿರಿಯ ಅಧಿಕಾರಿಗಳು ಕೊರೋನ 19 ಸೋಂಕಿಗೆ ತುತ್ತಾಗಲು ಕಾರಣರಾದರು.

ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಬ್ರೆಜಿಲ್ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಈವರೆಗೆ ಸಾವಿನ ಸಂಖ್ಯೆ 191,130 ಕ್ಕಿಂತ ಹೆಚ್ಚಿದೆ. ದೇಶದಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಜನರು ಕರೋನ ಸೋಂಕಿನಿಂದ ಈವರೆಗೆ ಚೇತರಿಸಿಕೊಂಡಿದ್ದಾರೆ.

SCROLL FOR NEXT