ವಿದೇಶ

ಕರೋನಾ ವೈರಸ್ ಪೀಡಿತ ವುಹಾನ್ ನಿಂದ ಮಾಲ್ಡೀವ್ಸ್ ಪ್ರಜೆಗಳ ರಕ್ಷಣೆ; ಭಾರತಕ್ಕೆ ಧನ್ಯವಾದ ಹೇಳಿದ ಅಧ್ಯಕ್ಷ ಸೋಲಿಹ್

Srinivasamurthy VN

ನವದೆಹಲಿ: ಮಾರಣಾಂತಿಕ ಕರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಿಂದ ಮಾಲ್ಡೀವ್ಸ್ ಪ್ರಜೆಗಳನ್ನು ರಕ್ಷಿಸಿದ ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್ ಧನ್ಯವಾದ ಹೇಳಿದ್ದಾರೆ.

ಇಂದು ವೈರಸ್ ಪೀಡಿತ ವುಹಾನ್ ನಿಂದ ಭಾರತದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನ 324 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಿತ್ತು. ಈ ಪೈಕಿ 7 ಮಂದಿ ಮಾಲ್ಡೀವ್ಸ್ ಪ್ರಜೆಗಳಾಗಿದ್ದರು. ಇದೀಗ ಇದೇ ಕಾರಣಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್, ಕರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ ಮಾಲ್ಡೀವ್ಸ್ ಪ್ರಜೆಗಳನ್ನು ಸುರಕ್ಷಿತ ಸ್ಶಳಕ್ಕೆ ರವಾನಿಸಲಾಗಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಇಲಾಖೆ ಮತ್ತು ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಭಾರತದ ಈ ಕಾರ್ಯ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸೌಹಾರ್ಧ ಸಂಬಂಧಕ್ಕೆ ಉದಾಹರಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT