ವಿದೇಶ

ಅಫ್ಘಾನ್‌ನಲ್ಲಿ ಭಾರತದ ಮೂಲದವರೂ ಸೇರಿ 59 ತಾಲಿಬಾನ್ ಉಗ್ರರ ಶರಣಾಗತಿ

Srinivasamurthy VN

ಹೆರಾತ್: ಪಶ್ಚಿಮ ಅಫ್ಘಾನಿಸ್ತಾನದ ಮೂರು ಪ್ರಾಂತ್ಯಗಳಲ್ಲಿ 59 ತಾಲಿಬಾನ್ ಉಗ್ರರು ಸರ್ಕಾರಿ ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ ಎಂದು ವಿಶೇಷ ಪಡೆಗಳ ಕಮಾಂಡ್‌ ಮಂಗಳವಾರ ತಿಳಿಸಿದೆ.

ವಿಶ್ವಸಂಸ್ಥೆಯ ಮೂಲಗಳು ಬಿಡುಗಡೆ ಮಾಡಿರುವ ವರದಿ ಅನ್ವಯ, ಅಬ್ ಕಮರಿ ಜಿಲ್ಲೆ, ಬಡ್ಗಿಸ್ ಪ್ರಾಂತ್ಯ, ಶರಕ್ ಜಿಲ್ಲೆ, ಘೋರ್ ಪ್ರಾಂತ್ಯ ಮತ್ತು ಹೆರಾತ್ ಪ್ರಾಂತ್ಯದ ಚಿಶ್ತಿ ಷರೀಫ್ ಜಿಲ್ಲೆಯಲ್ಲಿ ಸೋಮವಾರ ಒಟ್ಟು 59 ತಾಲಿಬಾನ್ ಉಗ್ರರು ಅಫಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ ಎಂದು ಅಫಘಾನ್ ರಾಷ್ಟ್ರೀಯ ಸೇನಾ ವಿಶೇಷ ಕಾರ್ಯಾಚರಣೆ ದಳ ಹೇಳಿಕೆಯಲ್ಲಿ ತಿಳಿಸಿದೆ.

ಶರಣಾದ ಉಗ್ರರಲ್ಲಿ ಮೂವರು ತಾಲಿಬಾನ್ ವಿಭಾಗೀಯ ಕಮಾಂಡರ್‌ಗಳಾದ ಮುಲ್ಲಾ ಅಬ್ದುಲ್ ನಾಸಿರ್, ಮುಲ್ಲಾ ಸಲಾಹುದ್ದೀನ್ ಮತ್ತು ಅಬ್ದುಲ್ ಹಾದ್ ಕೂಡ ಸೇರಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ ಮೂಲದ ಉಗ್ರರು
ಇನ್ನು ಶರಣಾದ ಉಗ್ರರ ಪೈಕಿ ಆಪ್ಘಾನಿಸ್ತಾನ ಮೂಲದ ಉಗ್ರರು ಮಾತ್ರವಲ್ಲದೇ, ಭಾರತೀಯರು, ಪಾಕಿಸ್ತಾನಿಗಳು, ಕೆನಡಿಯನ್ನರು, ಫ್ರೆಂಚ್ ಮೂಲದ ಉಗ್ರರೂ ಸೇರಿದ್ದಾರೆ ಎನ್ನಲಾಗಿದೆ. ಆದರೆ ಶರಣಾಗಿರುವ ಉಗ್ರರ ಪೈಕಿ ಭಾರತೀಯ ಮೂಲದ ಉಗ್ರರ ಮಾಹಿತಿ ಈ ವರೆಗೂ ಲಭ್ಯವಾಗಿಲ್ಲ. ಆದರೆ ಇದೇ ವಿಚಾರವಾಗಿ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಜಾವೆದ್ ಝರೀಫ್ ಅವರು, ಇಸ್ಲಾಮಿಕ್ ಸ್ಟೇಟ್ ಉಗ್ರರು ಆಫ್ಘಾನಿಸ್ತಾನವನ್ನು ತಮ್ಮ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿದ್ದೇ ಭಾರತದ ಮೇಲಿನ ಪ್ರಭುತ್ವ ಸಾಧನೆಗಾಗಿ. ಇಸಿಸ್ ಉಗ್ರರ ಕಣ್ಣು ಭಾರತ ಮೇಲೆ ನೆಟ್ಟಿದ್ದು ಆಫ್ಘಾನಿಸ್ತಾನ ಮಾತ್ರವಲ್ಲದೇ ಭಾರತ ಕೂಡ ಉಗ್ರರ ಸಾಫ್ಚ್ ಟಾರ್ಗೆಟ್ ಆಗಿದೆ ಎಂದು ಎಚ್ಚರಿಕೆ ನೀಡಿದ್ದರು.

SCROLL FOR NEXT