ವಿದೇಶ

ಕಾಶ್ಮೀರ ವಿಷಯ ಪಾಕಿಸ್ತಾನ ಹಾಗೂ ಟರ್ಕಿಗೆ ನಿಕಟವಾದದ್ದು: ಅಧ್ಯಕ್ಷ ರೆಸೆಪ್ ಟೆಯಿಪ್ ಎರ್ಡೋಗನ್

Srinivas Rao BV

ಇಸ್ಲಾಮಾಬಾದ್: ವಿಶ್ವಸಂಸ್ಥೆ ಅಧಿವೇಶನದಲ್ಲಿ ಕಾಶ್ಮೀರದ ವಿಷಯವಾಗಿ ಪಾಕ್ ಪರ ನಿಂತು ಸಾವಿರಾರು ಕೋಟಿ ರೂಪಾಯಿ ನಷ್ಟ ಎದುರಿಸಿದ್ದರೂ ಟರ್ಕಿ ಅಧ್ಯಕ್ಷ ರೆಸೆಪ್ ಟೆಯಿಪ್ ಎರ್ಡೋಗನ್ ಗೆ ಇನ್ನೂ ಬುದ್ಧಿ ಬಂದಿರುವ ಲಕ್ಷಣಗಳಿಲ್ಲ. 

ಪಾಕಿಸ್ತಾನದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಟರ್ಕಿ ಅಧ್ಯಕ್ಷ ರೆಸೆಪ್ ಟೆಯಿಪ್ ಎರ್ಡೋಗನ್ ಮತ್ತೊಮ್ಮೆ ಕಾಶ್ಮೀರದ ವಿಚಾರವನ್ನು ಕೆದಕಿದ್ದಷ್ಟೇ ಅಲ್ಲದೇ ಪಾಕಿಸ್ತಾನವನ್ನು ಈ ವಿಷಯದಲ್ಲಿ ಸಂಪೂರ್ಣ ಬೆಂಬಲಿಸುವುದಾಗಿ ಹೇಳಿದ್ದಾರೆ.
 
ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ನಿಲುವನ್ನು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕಾಶ್ಮೀರ ವಿಷಯವನ್ನು ಸಂಘರ್ಷದಿಂದ ಅಲ್ಲದೇ ನ್ಯಾಯಸಮ್ಮತವಾಗಿ ಇತ್ಯರ್ಥಗೊಳಿಸಿಕೊಳ್ಳಬೇಕೆಂದು ಎಂದು ಎರ್ಡೋಗನ್ ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರ ವಿಷಯ ನಿಮಗೆಷ್ಟು ನಿಕಟವೋ ಅಷ್ಟೇ ನಮಗೂ ನಿಕಟವಾಗಿದೆ ಎಂದು ಪಾಕಿಸ್ತಾನಕ್ಕೆ ಹೇಳಿರುವ ಎರ್ಡೋಗನ್, ಕಾಶ್ಮೀರದ ಸಂಘರ್ಷವನ್ನು  ವಿಶ್ವಯುದ್ಧ-1 ಕ್ಕೆ ಹೋಲಿಕೆ ಮಾಡಿದ್ದಾರೆ. 

ಒಕ್ಕೂಟಕ್ಕೆ ಸೇರಿದ ಶಕ್ತಿಗಳಿಗೆ ಮತ್ತು ಒಟ್ಟೋಮನ್ ನಡುವೆ ಗಲ್ಲಿಪೋಲಿ ನಲ್ಲಿ ನಡೆದ ಯುದ್ಧಕ್ಕೆ ನಂಟು ಕಲ್ಪಿಸಿ ಮಾತನಾಡಿರುವ ಎರ್ಡೋಗನ್, ನಮ್ಮ ಕಾಶ್ಮೀರಿ ಸಹೋದರ ಸಹೋದರಿಯರು ದಶಕಗಳಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ. ಇತ್ತೀಚೆಗೆ ಏಕಪಕ್ಷೀಯವಾಗಿ ಕೈಗೊಂಡ ಕೆಲವು ನಿರ್ಣಯಗಳಿಂದ ಈ ನೋವು ಮತ್ತಷ್ಟು ಹೆಚ್ಚಾಗಿದೆ. ಗಲ್ಲಿಪೋಲಿ ಯುದ್ಧಕ್ಕೂ ಕಾಶ್ಮೀರ ಸಂಘರ್ಷಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಆರ್ಟಿಕಲ್ 370 ರದ್ದುಗೊಳಿಸಿರುವ ಕ್ರಮದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. 

SCROLL FOR NEXT