ವಿದೇಶ

ಭಾರತದ ನೀತಿಯಿಂದ ಪಾಕ್‌ನಲ್ಲಿ ನಿರಾಶ್ರಿತರ ಹೊಸ ಬಿಕ್ಕಟ್ಟು ಸೃಷ್ಟಿ: ಪ್ರಧಾನಿ ಇಮ್ರಾನ್ ಖಾನ್

Srinivasamurthy VN

ಇಸ್ಲಾಮಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಿರಾಶ್ರಿತರ ಕುರಿತ ಭಾರತದ ನೀತಿಯಿಂದಾಗಿ ಪಾಕಿಸ್ತಾನದಲ್ಲಿ ನಿರಾಶ್ರಿತರ ಹೊಸ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕವಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ನಿರಾಶ್ರಿತರ ಶೃಂಗಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ, 'ಭಾರತದ ಪ್ರಸ್ತುತ ಸ್ಥಿತಿಯನ್ನು ಗಮನಿಸುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ವಿಫಲವಾದರೆ, ಪಾಕಿಸ್ತಾನವು ನಿರಾಶ್ರಿತರ ಹೊಸ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಭಾರತದ ಉಗ್ರ ರಾಷ್ಟ್ರೀಯವಾದವನ್ನು ಅಂತರರಾಷ್ಟ್ರೀಯ ಸಮುದಾಯವು ಪರಿಶೀಲಿಸದೇ ಹೋದಲ್ಲಿ ಅದು ವಿನಾಶಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದ್ದು, 'ಜವಾಹರ ಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಅವರ ಭಾರತ ಈಗಿಲ್ಲ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಬಹು ದೊಡ್ಡ ಸಮಸ್ಯೆ ಎದುರಾಗಲಿದೆ’ ಎಂದು ಖಾನ್ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಭಾರತಕ್ಕೆ ಪಾಕಿಸ್ತಾನವನ್ನು ನಾಶ ಮಾಡಲು 11 ದಿನ ಸಾಕು ಎಂದು ನರೇಂದ್ರ ಮೋದಿ ಹೇಳಿದ್ದರು.  ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಪ್ರಧಾನಿಯೊಬ್ಬರು ಹೇಳುವ ಬೇಜವಾಬ್ದಾರಿಯ ಹೇಳಿಕೆ ಇದು. ಅವರ ಹಿಂಧುತ್ವ ಸಿದ್ಧಾಂತದಿಂದಾಗಿ ಕಾಶ್ಮೀರಿಗರನ್ನು 200ಕ್ಕೂ ಅಧಿಕ ದಿನಗಳ ಕಾಲ ದಿಗ್ಭಂಧನದಲ್ಲಿರಿಸಲಾಗಿತ್ತು. ಇದೇ ಸಿದ್ಧಾಂತದಿಂದಾಗಿಯೇ ಬಿಜೆಪಿ ಸರ್ಕಾರ ಎರಡು ತಾರತಮ್ಯದ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ಧು ಮಾಡಿತು. ಅಲ್ಲದೆ ಸಿಎಎ ಮೂಲಕ ಅಲ್ಪ ಸಂಖ್ಯಾತರನ್ನು ತುಳಿಯುವ ಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT