ವಿದೇಶ

ಕೊರೊನಾ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 2236 ಕ್ಕೆ ಏರಿಕೆ

Manjula VN

ಬೀಜಿಂಗ್: ಇತ್ತೀಚೆಗೆ ಚೀನಾದಲ್ಲಿ ಕಾಣಿಸಿಕೊಂಡಿರುವ ಮಹಾಮಾರಿ ಕೊರೊನಾ ವೈರಾಣು ಸೋಂಕಿಗೆ 2236 ಜನರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದ 31 ಪ್ರಾಂತ್ಯಗಳಲ್ಲಿ ಸೋಂಕಿತರ ಸಂಖ್ಯೆ 75465 ದಷ್ಟಿದೆ. ಈ ಪೈಕಿ 54965 ಜನರು ಇನ್ನೂ ಗುಣಮುಖರಾಗಿಲ್ಲ. 11633 ಜನರ ಸ್ಥಿತಿ ಗಂಭೀರವಾಗಿದೆ. 18264 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ಆಯೋಗದ ಹೇಳಿಕೆ ತಿಳಿಸಿದೆ.

ಸೋಂಕಿನ ಪರಿಣಾಮ ಹುಬೆ ಪ್ರಾಂತ್ಯದಲ್ಲಿ 115 ಮಂದಿ ಸಾವನ್ನಪ್ಪಿದ್ದು, ಪರಿಣಾಮ ಸಾವಿನ ಸಂಖ್ಯೆ 2,236ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಕೊರೋನಾ ವೈರಸ್ ವೊದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ.

ವಿಶ್ವ ಆರೋಗ್ಯ ಸಂಸ್ಥೆ ಅನ್ವಯ ಕೊರೋನಾ ವೈರಸ್ ಸೀ-ಫುಡ್ ಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗುತ್ತಿದೆ. ವಿಷಾಣುಗಳ ವರ್ಗಕ್ಕೆ ಸೇರಿದ ಈ ಕೊರೋನಾ ವೈರಸ್ ನಿಂದ ಜನರು ರೋಗಕ್ಕೀಡಾಗುತ್ತಿದ್ದು, ಜೀವ ಕಳೆದುಕೊಳ್ಳುತ್ತಿದ್ದಾರೆ. 

ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೈಶಿಸುತ್ತಿದೆ. ಪ್ರಾಣಿಗಳ ದೇಹ ಸೇರಿದ ಈ ವೈರಸ್ ಅಪರೂಪ ಎಂಬಂತೆ ಮನುಷ್ಯರ ದೇಹವನ್ನೂ ಸೇರುತ್ತಿದೆ. 

ಸೋಂಕು ತಗುಲಿದವರಿಗೆ ತೀವ್ರ ಶೀತ, ಕೆಮ್ಮು, ಗಂಟಲು ಕಟ್ಟುವಿಕೆ, ಉಸಿರಾಟದ ತೊಂದರೆ, ತಲೆನೋವು, ಜ್ವರದ ಸಮಸ್ಯೆಗಳು ಉಂಟಾಗುತ್ತವೆ. ಬಳಿಕ ಇದು ನ್ಯೂಮೋನಿಯಾ ಹಾಗೂ ಕಿಡ್ನಿಗಳಿಗೆ ಹಾನಿಯುಂಟು ಮಾಡುತ್ತದೆ. ಕೊರೋನಾ ವೈರಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಕೂಡ ಆಗಿದ್ದು, ವೈರಸ್ ಹರಡದಂತೆ ಅದನ್ನು ನಿಯಂತ್ರಣದಲ್ಲಿಡಲು ಹಾಗೂ ತಡೆಗಟ್ಟಲು ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ.

SCROLL FOR NEXT