ವಿದೇಶ

ಚೀನಾ, ಕೊರಿಯಾ ಬಳಿಕ ಇದೀಗ ಇಟಲಿ, ಇರಾನ್ ನಲ್ಲೂ 'ಕೊರೋನಾ' ಅಬ್ಬರ, 50ಕ್ಕೂ ಹೆಚ್ಚು ಸಾವು

Srinivasamurthy VN

ಟೆಹರಾನ್: ಚೀನಾ ಮತ್ತು ಕೊರಿಯಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಇದೀಗ ಇಟಲಿ ಮತ್ತು ಇರಾನ್ ನಲ್ಲೂ ತನ್ನ ಅಬ್ಬರ ಆರಂಭಿಸಿದೆ.

ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದಿರುವ ಮಾರಣಾಂತಿಕ ಕೊರೋನಾ ವೈರಸ್ ದಕ್ಷಿಣ ಕೊರಿಯಾದಲ್ಲೂ 8 ಮಂದಿ ಸಾವಿಗೆ ಕಾರಣವಾಗಿದೆ. ಅಲ್ಲದೆ ಕೊರಿಯಾದಲ್ಲಿ ಈ ವರೆಗೂ 760 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದಾರೆ. 

ಈ ಸುದ್ದಿ ಬೆನ್ನಲ್ಲೇ ಕೊರೋನಾ ಹೆಮ್ಮಾರಿ ಇಟಲಿ ಮತ್ತು ಇರಾನ್ ದೇಶಕ್ಕೂ ವ್ಯಾಪಿಸಿದ್ದು, ಇರಾನ್ ನಲ್ಲಿ ಕನಿಷ್ಠ 250ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದೆ. ಈ ಪೈಕಿ ಇರಾನ್ ನಲ್ಲಿ ಈವರೆಗೆ 50 ಮಂದಿ ಈ ಮಾರಕ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಅರೆಸರಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಅದರೆ ಇರಾನ್ ಸರ್ಕಾರ ಮಾತ್ರ ಅಧಿಕೃತವಾಗಿ ಇದನ್ನು ದೃಢಪಡಿಸಿಲ್ಲ. ಇರಾನಿನ ಕ್ವಾಮ್ ನಗರದಲ್ಲಿ ಕೊರೋನ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು ಅಲ್ಲಿ ರೋಗದ ಶಂಕೆಯ ಕಾರಣ 250ಕ್ಕೂ ಅಧಿಕ ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದೂ ಖೊಮ್ ನಗರದ ಅಧಿಕಾರಿ ಅಹ್ಮದ್ ಅಮಿರಿಯಾಬಾದಿ ಫರ್ಹಾನಿ ಹೇಳಿದ್ದಾರೆ. ಇದೇ 13ರಿಂದ ಇರಾನಿ ನಲ್ಲಿ ಈವರೆಗೆ 50 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಚೀನಾ ದೇಶಗಳಿಂದ ಅಕ್ರಮವಾಗಿ ದೇಶ ಪ್ರವೇಶಿಸಿದ ವ್ಯಕ್ತಿಗಳಿಂದ ದೇಶದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡಲು ಮೂಲ ಕಾರಣ ಎನ್ನಲಾಗಿದೆ.

ಇಟಲಿಯಲ್ಲೂ 6 ಸಾವು
ಇತ್ತ ಇರಾನ್ ಬೆನ್ನಲ್ಲೇ ಇಟಲಿಯಲ್ಲೂ ಕೊರೋನಾ ಮರಣ ಮೃದಂಗ ಆರಂಭಿಸಿದ್ದು, ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ 6 ಮಂದಿ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತೂ ಇಟಲಿ ಸರ್ಕಾರ ಸ್ಪಷ್ಟನೆ ನೀಡಿಲ್ಲವಾದರೂ, ಸರ್ಕಾರಿ ಸುದ್ದಿಸಂಸ್ಥೆಯ ಪ್ರಕಾರ ಕೊರೋನಾ ವೈರಸ್ ಸೊಂಕಿಗೆ ಹಲವರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಆದರೆ ಸಾವಿನ ಕುರಿತು ನಿಖರ ಸಂಖ್ಯೆಯ ವರದಿ ಮಾಡಿಲ್ಲ.

SCROLL FOR NEXT