ವಿದೇಶ

ಆಸ್ಟ್ರೇಲಿಯಾ: 10,000 ಒಂಟೆಗಳ ಹತ್ಯೆಗೆ ಸಿದ್ಧತೆ: ಕಾರಣ ಗೊತ್ತೇ?

Srinivas Rao BV

ಸಿಡ್ನಿ: ಸತತವಾಗಿ ಹರಡುತ್ತಿರುವ ಕಾಳ್ಗಿಚ್ಚಿನ ನಡುವೆಯೇ ಆಸ್ಟ್ರೇಲಿಯಾ 10,000 ಒಂಟೆಗಳ ಮಾರಣಹೋಮ ನಡೆಸಲು ಸಿದ್ಧತೆ ನಡೆಸಿದೆ.

ಒಂಟೆಗಳ ಹತ್ಯೆಗಾಗಿ ಆಸ್ಟ್ರೇಲಿಯಾ 5 ದಿನಗಳ ಕಾರ್ಯಾಚರಣೆ ನಡೆಸಲಿದ್ದು ಹೆಲಿಕಾಫ್ಟರ್ ಗಳ ಮೂಲಕ ಗುಂಡಿಕ್ಕಿ ಒಂಟೆಗಳನ್ನು ಹತ್ಯೆ ಮಾಡಲಾಗುತ್ತದೆ. 

ಕಾಳ್ಗಿಚ್ಚಿನ ಸಮಯದಲ್ಲಿ ಒಂಟೆಗಳು ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದರಿಂದ ಹತ್ಯೆ ಮಾಡಲು ನಿರ್ಧರಿಸಲಾಗಿದೆ ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ತಿಳಿಸಿರುವುದನ್ನು ದಿ ಆಸ್ಟ್ರೇಲಿಯನ್ ವರದಿ ಮೂಲಕ ತಿಳಿದುಬಂದಿದೆ. 

ಕಾಳ್ಗಿಚ್ಚಿನಿಂದ ಈಗಾಗಲೇ 12 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 480 ಮಿಲಿಯನ್ ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ.

SCROLL FOR NEXT