ವಿದೇಶ

ಬರಪೀಡಿತ ಆಸ್ಟ್ರೇಲಿಯಾದಲ್ಲಿ 5 ಸಾವಿರ ಒಂಟೆಗಳ ಹತ್ಯೆ

Manjula VN

ಸಿಡ್ನಿ: ಜಲಮೂಲಗಳ ಮೇಲೆ ದಾಳಿ ಮಾಡಿ ಯಥೇಚ್ಚವಾಗಿ ನೀರು ಕುಡಿಯುತ್ತಿರುವ ಹಿನ್ನೆಲೆಯಲ್ಲಿ ಬರಪೀಡಿತ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 5 ಸಾವಿರ ಒಂಟೆಗಳನ್ನು ಹತ್ಯೆ ಮಾಡಲಾಗಿದೆ. 

ಇತ್ತೀಚೆಗೆ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಗುರಿಯಾಗಿದ್ದು, ಭಾರೀ ಕ್ಷಾಮಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಒಂಟೆಗಳು ಜಲಮೂಲಗಳಮೇಲೆ ದಾಳಿ ನಡೆಸಿ ಯಥೇಚ್ಛವಾಗಿ ನೀರು ಕುಡಿಯುತ್ತಿವೆ. ಅಲ್ಲದೆ, ಬೆಳೆ ಹಾನಿ ಮಾಡಿ ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ 5 ದಿನಗಳಲ್ಲಿ 5 ಸಾವಿರ ಒಂಟೆಗಳನ್ನು ಹತ್ಯೆ ಮಾಡಲಾಗಿದ್ದು, ದಕ್ಷಿಣ ಆಸ್ಟ್ರೇಲಿಯಾ ಒಂದರಲ್ಲಿಯೇ ಇಷ್ಟೊಂದು ಹತ್ಯೆಗಲು ನಡೆದಿವೆ. 

ಇನ್ನು ಸತ್ತ ಒಂಟೆಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತಿದ್ದು, ಇವು ಈಗಾಗಲೇ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನ ಸಮುದಾಯದ ಸಂಕಷ್ಟವನ್ನು ಮತ್ತಷ್ಟು ಉಲ್ಭಣಗೊಳಿಸಿವೆ ಎಂದು ಸರ್ಕಾರ ಹೇಳಿದೆ. 

ತೀವ್ರ ಬರ ಹಿನ್ನೆಲೆ ಒಂಟಗಳು ಆಹಾರ ಹಾಗೂ ನೀರು ಅರಸಿ ಊರುಗಳತ್ತ ನುಗ್ಗುತ್ತಿದ್ದು, ಇದು ಬುಡಕಟ್ಟು ಗ್ರಾಮೀಣ ಜನರಿಗೆ ಅಪಾಯ ಸೃಷ್ಟಿಸಿವೆ ಹೀಗಾಗಿ ಸರ್ಕಾರ ಒಂಟೆಗಳ ಕೊಲ್ಲಲು ಆದೇಶಿತ್ತು ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ. 

ಎಪಿವೈ ಲ್ಯಾಂಡ್ಸ್ ಎಂಬ 2,300 ಮೂಲ ನಿವಾಸಿಗಳು ಇರುವ ಪ್ರದೇಶದಲ್ಲಿ ಈ ಒಂಟೆಗಳ ಹತ್ಯೆ ನಡೆದಿದ್ದು, ಹೆಲಿಕಾಪ್ಟರ್ ನಿಂದ ಸ್ನೈಪರ್ ಗನ್ ಬಳಸಿ ಭಾನುವಾರ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. =

SCROLL FOR NEXT