ವಿದೇಶ

29 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದ ಚೀನಾದ ಆರ್ಥಿಕತೆ 

Nagaraja AB

ಕಳೆದ ವರ್ಷ ಚೀನಾದ ಆರ್ಥಿಕತೆ ಶೇ.6. 1 ರಷ್ಟು ಏರಿಕೆಯಾಗಿದ್ದು, ಇದು 29 ವರ್ಷಗಳಲ್ಲಿ ಅತಿ ಕಡಿಮೆ ವಾರ್ಷಿಕ ಬೆಳವಣಿಗೆಯ ದರವಾಗಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಇಂದು ಹೇಳಿದೆ.

ದುರ್ಬಲ ದೇಶೀಯ ಬೇಡಿಕೆ  ಮತ್ತು ಅಮೆರಿಕಾ ಜೊತೆಗಿನ 18 ತಿಂಗಳ ಕಾಲದ ವ್ಯಾಪಾರ ಯುದ್ಧವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ದೈತ್ಯಕ್ಕೆ ನಷ್ಟವನ್ನುಂಟುಮಾಡಿದೆ.

 ಚೀನಾ ಮತ್ತು ಯುಎಸ್ ಬಹುನಿರೀಕ್ಷಿತ ಮೊದಲ ಹಂತದ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ ಹೊಸ ದತ್ತಾಂಶವು ಬಂದಿದ್ದು,18 ತಿಂಗಳ ಸುದೀರ್ಘ ವ್ಯಾಪಾರ ಹೋರಾಟದಲ್ಲಿ  ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಪರಸ್ಪರ ರಫ್ತು ಮಾಡುವ ಅರ್ಧ ಟ್ರಿಲಿಯನ್ ಡಾಲರ್ ಮೌಲ್ಯದ ಶೇಕಡಾ 25 ರಷ್ಟು ಸುಂಕದ ಹೊಡೆತ ಬಿದ್ದಿದೆ.  

ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ಕಳೆದ ವರ್ಷ ಶೇಕಡಾ 6.1 ರಷ್ಟು ಏರಿಕೆಯಾಗಿದೆ.  ಇದು 1990 ರ ನಂತರದ ಕಳಪೆ ಪ್ರದರ್ಶನವಾಗಿದೆ, ಆದರೆ ಇದು ಮಾನಸಿಕವಾಗಿ ಶೇ. 6ಕ್ಕಿಂತ  ಹೆಚ್ಚಿನ ಮಟ್ಟದಲ್ಲಿದೆ. ಸರ್ಕಾರ ನಿಗದಿಪಡಿಸಿದ 6 ರಿಂದ 6.5 ಗುರಿಯೊಳಗೆ ಜಿಡಿಪಿ ಬೆಳವಣಿಗೆ ಉತ್ತಮವಾಗಿದೆ ಎಂದು ಅದು ಹೇಳಿದೆ

SCROLL FOR NEXT