ವಿದೇಶ

ದಾವೋಸ್ ವೇದಿಕೆಯಲ್ಲಿ ಮೋದಿ, ಟ್ರಂಪ್ ವಿರುದ್ದ ಜಾರ್ಜ್ ಸೊರೊಸ್ ವಾಗ್ದಾಳಿ!

Lingaraj Badiger

ದಾವೋಸ್: ಹಂಗೇರಿ- ಅಮೆರಿಕನ್  ಬಿಲಿಯನೇರ್ ಹಾಗೂ ಲೋಕೋಪಕಾರಿ ಜಾರ್ಜ್ ಸೊರೊಸ್ ಅವರು ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಸತ್ತಾತ್ಮಕವಾಗಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಮ್ ಪ್ರಾಬಲ್ಯದ ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಸೊರೊಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದ್ದು, ಜಗತ್ತು ತನ್ನ ಸುತ್ತಲೇ ತಿರುಗಬೇಕೆಂದು ಟ್ರಂಪ್ ಬಯಸುತ್ತಾರೆ. ಅಮೆರಿಕಾ ಅಧ್ಯಕ್ಷರಾಗಬೇಕೆಂಬ ಅವರ ಬಯಕೆ ಈಡೇರುತ್ತಿದ್ದಂತೆಯೇ ಅಧ್ಯಕ್ಷರಿಗೆ  ಸೀಮಿತಗೊಂಡಿದ್ದ ಸಾಂವಿಧಾನಿಕ ಮಿತಿಗಳನ್ನು ಅವರು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಟ್ರಂಪ್ ತಮ್ಮ ವರ್ತನೆಗಳಿಂದಾಗಿ ಅಮೆರಿಕಾ ಸಂಸತ್ತಿನಲ್ಲಿ ವಾಗ್ದಂಡನೆ ಎದುರಿಸುತ್ತಿದ್ದಾರೆ. ಆದರೂ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು, ದೇಶದ ಹಿತಾಸಕ್ತಿಗಳನ್ನು ಕಡೆಗಣಿಸಿ, ಚುನಾಯಿತರಾಗಲು ಟ್ರಂಪ್ ಏನು ಮಾಡಲು ಹೇಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT