ವಿದೇಶ

ಕರೋನ ವೈರಸ್: ವುಹಾನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಾಪಸ್ಸಾಗುವುದಕ್ಕೆ ಅನುಮತಿ ನೀಡಲು ಚೀನಾಗೆ ಭಾರತ ಮನವಿ 

Srinivas Rao BV

ಚೀನಾದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ 250 ಭಾರತೀಯ ವಿದ್ಯಾರ್ಥಿಗಳು ವುಹಾನ್ ನಲ್ಲಿದ್ದು, ವಾಪಸ್ಸಾಗುವುದಕ್ಕೆ ಅನುಮತಿ ನೀಡಬೇಕೆಂದು ಚೀನಾಗೆ ಮನವಿ ಮಾಡಿದೆ. 

ವುಹಾನ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವೈರಾಣು ಪತ್ತೆಯಾದಾಗಿನಿಂದ ಚೀನಾದ ಅಧಿಕಾರಿಗಳು ವುಹಾನ್ ನಗರದಿಂದ ಜನರು ಹೊರ ಹೋಗದಂತೆ ತಡೆದಿದ್ದಾರೆ. ಈ ವೈರಾಣುವಿನ ಸೋಂಕು ಈ ವರೆಗೂ 1,300 ಜನರಿಗೆ ತಗುಲಿದ್ದು, 41 ಜನರು ಸಾವನ್ನಪ್ಪಿದ್ದಾರೆ. ಹೊಸ ವರ್ಷಾಚರಣೆ ರಜೆ ಇರುವ ಹಿನ್ನೆಲೆಯಲ್ಲಿ ಭಾರತದ ಬಹುತೇಕ ವಿದ್ಯಾರ್ಥಿಗಳು ವಾಪಸ್ಸಾಗಿದ್ದು 250-300 ಜನ ಚೀನಾದಲ್ಲೇ ಉಳಿದಿದ್ದಾರೆ. ಈ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ಸಾಗಲು ಯತ್ನಿಸುತ್ತಿದ್ದು, ಅನುಮತಿ ನೀಡಬೇಕೆಂದು ಭಾರತ ಚೀನಾಗೆ ಮನವಿ ಮಾಡಿದೆ. 
 

SCROLL FOR NEXT