ಸ್ಫೋಟ ಬಳಿಕ ಕಾಣಿಸಿಕೊಂಡ ಬೆಂಕಿ 
ವಿದೇಶ

ಇರಾನ್ ರಾಜಧಾನಿ ಟೆಹ್ರಾನ್ ನ ಆಸ್ಪತ್ರೆಯಲ್ಲಿ ಪ್ರಬಲ ಸ್ಫೋಟ: 19 ಮಂದಿ ಸಾವು

ಇರಾನ್ ರಾಜಧಾನಿ ಟೆಹ್ರಾನ್ ನ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ ಪ್ರಬಲ ಸ್ಫೋಟ ಸಂಭವಿಸಿ ಕನಿಷ್ಠ 19 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆ ವರದಿ ಮಾಡಿದೆ.

ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ ಪ್ರಬಲ ಸ್ಫೋಟ ಸಂಭವಿಸಿ ಕನಿಷ್ಠ 19 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆ ವರದಿ ಮಾಡಿದೆ.

ಟೆಹ್ರಾನ್ ನ ಸಿನಾ ಅಟ್ಹರ್ ಆರೋಗ್ಯ ಕೇಂದ್ರದಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿದ್ದು ಅಕ್ಕಪಕ್ಕದ ಕಟ್ಟಡಗಳಿಗೆ ಸಹ ಹಾನಿಯುಂಟಾಗಿದೆ. ಸ್ಫೋಟದ ನಂತರ ದಟ್ಟವಾದ ಹೊಗೆ ಹೊರಸೂಸಿದೆ.

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಸಿನಾ ಅಟ್ಹರ್ ಕ್ಲಿನಿಕ್ ನಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿತು. ಕೂಡಲೇ ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ವೈದ್ಯಕೀಯ ಉಪಕರಣಗಳನ್ನು ಕೂಡಲೇ ಹೊರಹಾಕಲಾಗಿದೆ ಎಂದು ಟೆಹ್ರಾನ್ ನ ತುರ್ತು ವೈದ್ಯಕೀಯ ಸೇವೆ ಹೇಳಿಕೆಯಲ್ಲಿ ತಿಳಿಸಿದೆ.

13 ಮಂದಿಯ ಸಾವು ದೃಢಪಟ್ಟಿದೆ. 6 ಮಂದಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೆಹ್ರಾನ್ ಅಗ್ನಿಶಾಮಕ ಇಲಾಖೆಯ ವಕ್ತಾರರು ತಿಳಿಸಿದ್ದು ಅಗ್ನಿ ಶಾಮಕ ಸಿಬ್ಬಂದಿ ಮತ್ತೆ 6 ಮಂದಿಯ ಶವಗಳನ್ನು ಹೊರತೆಗೆಯುವ ಮೂಲಕ ಮಡಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಕ್ರಮ ಆಸ್ತಿ ಗಳಿಕೆ ಕೇಸು: ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಬೆನ್ನಲ್ಲೇ IPS ಅಧಿಕಾರಿ ವರ್ಗ

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು, ಅಣು ಒಪ್ಪಂದಕ್ಕೆ ಯುರೇನಿಯಂ ಹಸ್ತಾಂತರ ಕಡ್ಡಾಯ: ಅಮೆರಿಕ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ ವ್ಯಾಪಾರದ ಗುರಿ; Video

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video