ವಿದೇಶ

ಚೀನಾ ಆಪ್ ಗಳ ನಿಷೇಧಕ್ಕೆ ಭಾರತದ ಮಾದರಿ ಅನುಸರಿಸಲು ಅಮೆರಿಕಾ ಶಾಸಕರ ಆಗ್ರಹ!

Srinivas Rao BV

ನ್ಯೂಯಾರ್ಕ್:  ಭಾರತದಲ್ಲಿ 59 ಚೀನಾ ಆಪ್ ಗಳನ್ನು ನಿಷೇಧಿಸಿರುವುದಕ್ಕೆ ಅಮೆರಿಕಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗತೊಡಗಿದ್ದು, ಭಾರತದ ಮಾದರಿಯನ್ನು ಅನುಸರಿಸಬೇಕೆಂದು ಅಮೆರಿಕಾದ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ಟಿಕ್ ಟಾಕ್ ನಂತಹ ಆಪ್ ಗಳು ಅಮೆರಿಕಾದ ಭದ್ರತೆಗೂ ಮಾರಕವಾಗಿದ್ದು, ಅಮೆರಿಕ ಸರ್ಕಾರ ಭಾರತದ ಮಾದರಿಯಲ್ಲಿ ಚೀನಾ ಆಪ್ ಗಳನ್ನು ನಿಷೇಧಿಸಬೇಕೆಂದು ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಆಗ್ರಹಿಸಿದ್ದಾರೆ. ರಿಬಬ್ಲಿಕನ್ ಕಾಂಗ್ರೆಸ್ಮನ್ ರಿಕ್ ಕ್ರ್ವಾಫೋರ್ಡ್ ಸಹ ಟಿಕ್ ಟಾಕ್ ನ್ನು ನಿಷೇಧಿಸಬೇಕೆಂದು ಟ್ವೀಟ್ ಮಾಡಿದ್ದಾರೆ.

ಚೀನಾ ಸರ್ಕಾರ ತನ್ನದೇ ಆದ ಉದ್ದೇಶಗಳಿಗೆ ಟಿಕ್ ಟಾಕ್ ನ್ನು ಬಳಸಿಕೊಳ್ಳುತ್ತಿದೆ ಎಂದು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರಿಯೆನ್ ಎಚ್ಚರಿಸಿದ್ದರು. ಟಿಕ್ ಆಪ್ ನ್ನು ಅಮೆರಿಕಾದಲ್ಲಿ 40 ಮಿಲಿಯನ್ ಜನರು ಬಳಕೆ ಮಾಡುತ್ತಿದ್ದಾರೆ.

SCROLL FOR NEXT