ವಿದೇಶ

ಗಾಳಿಯಿಂದಲೂ ಹರಡುತ್ತೆ ಮಾರಕ ಕೊರೋನಾ ವೈರಸ್: ಸ್ಫೋಟಕ ಮಾಹಿತಿ ಹೊರ ಹಾಕಿದ ವಿಜ್ಞಾನಿಗಳು

Srinivasamurthy VN

ನವದೆಹಲಿ: ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗಾಳಿಯಿಂದಲೂ ಹರಡುತ್ತದೆ ಎಂಬ ಭಯಾನಕ ಮಾಹಿತಿಯನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ.

ಹೌದು.. ಇಷ್ಟು ದಿನ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯ ಸೀನುವಿಕೆಯಿಂದ ಬರುವ ಡ್ರಾಪ್ ಲೆಟ್ಸ್, ಸ್ಪರ್ಶ ಮತ್ತು ಆತ ಮುಟ್ಟಿದ ವಸ್ತುಗಳಿಂದ ಹರಡುತ್ತದೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಜಗತ್ತಿನ ಸುಮಾರು 239 ವಿಜ್ಞಾನಿಗಳು ಕೊರೋನಾ ವೈರಸ್ ಗಾಳಿಯಿಂದಲೂ ಹರಡುತ್ತದೆ ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

ಕೊರೋನಾ ವೈರಸ್ ಮೇಲೆ ನಿರಂತರವಾಗಿ ಸಂಶೋಧನೆ ನಡೆಸಿರುವ ವಿವಿಧ ದೇಶಗಳ ಸುಮಾರು 239 ವೈದ್ಯರು, 'ಸೋಂಕಿತ ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ
ಮೂಲಗಳ ಪ್ರಕಾರ ಈ ಬಗ್ಗೆ 32 ದೇಶಗಳ 239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ಪತ್ರ ಬರೆದಿದ್ದು, ಕೊರೋನಾ ರೋಗದ ಸೋಂಕು ಗಾಳಿಯ ಮುಖಾಂತರವೂ ಹರಡಲಿದೆ. ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕ್ರಮ ಕೈಗೊಳ್ಳಿ. ಮತ್ತು ಈಗಾಗಲೇ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳನ್ನು ಪುನರ್ ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ.

ಸೈನ್ಸ್ ಜರ್ನಲ್‌ ಪತ್ರಿಕೆಯಲ್ಲಿ ಪ್ರಕಟಿಸಲು ಸಂಶೋಧನಾ ವರದಿ ಸಿದ್ದಪಡಿಸಿರುವ ವೈದ್ಯಕೀಯ ಕ್ಷೇತ್ರದ ತಜ್ಞರು ಸಂಶೋಧನೆಯ ಸಾರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಪತ್ರದಲ್ಲಿ 'ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಾರ್ಗದರ್ಶಿ ಸೂತ್ರಗಳನ್ನು ಪುನರ್ ಪರಿಶೀಲಿಸಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

SCROLL FOR NEXT