ವಿದೇಶ

ದಕ್ಷಿಣ ಆಫ್ರಿಕಾ: ಸೋಲ್ ಹಿಂದೂ ಪೊಲಿಟಿಕಲ್ ಪಾರ್ಟಿ ಸಂಸ್ಥಾಪಕ ಜಯರಾಜ್ ಬಚು ಕೊರೋನಾಗೆ ಬಲಿ

Shilpa D

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಸೋಲ್ ಹಿಂದೂ ಪೊಲಿಟಿಕಲ್ ಪಕ್ಷದ ಸಂಸ್ಥಾಪಕ ಸದಸ್ಯ ಜಯರಾಜ್ ಬಚು ಕೊರೋನಾ ಗೆ ಬಲಿಯಾಗಿದ್ದಾರೆ. ಡರ್ಬನ್ ನಿವಾಸಿಯಾದ ಬಡುವ ಅವರಿಗೆ 75 ವರ್ಷ ವಯಸ್ಸಾಗಿತ್ತು. ಶನಿವಾರ ಅವರ ಅಂತ್ಯ ಸಂಸ್ಕಾರ ನೆರೆವೇರಿದೆ,

ಕೊರೋನಾ ಸೋಂಕಿತರಾಗಿದ್ದ ನನ್ನ ತಂದೆಯನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಉಮೇಶ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ  ಸಂಜೆ ಅವರ ಇಹಲೋಕ ತ್ಯಜಿಸಿದ್ದಾರೆ, ತಂದೆಯನ್ನು ನೋಡಲು ಕುಟುಂಬದ ಇಬ್ಬರು ಸದಸ್ಯರು ಆಸ್ಪತ್ರೆಗೆ ತೆರಳಲು ಅನುಮತಿ ನೀಡಲಾಗಿತ್ತು, ನಾನು ಆಸ್ಪತ್ರೆಗೆ ಹೋಗುವ ಸಮಯಕ್ಕೆ ಅವರು ನಮ್ಮನ್ನೆಲ್ಲಾ ಅಗಲಿದ್ದರು ಎಂದು ಉಮೇಶ್ ಹೇಳಿದ್ದಾರೆ.

ಐದು ದಶಕಗಳಿಂದ ಸಮುದಾಯ ಮತ್ತು ರಾಜಕೀಯ ಪಕ್ಷದಲ್ಲಿ ಬಚು ಕೆಲಸ ನಿರ್ವಹಿಸಿದ್ದರು.  ಹಿಂದೂಗಳ ಅಗತ್ಯತೆಗಳನ್ನು ಪೂರೈಸುವ ಪ್ರಾಂತೀಯ, ರಾಷ್ಟ್ರೀಯ ಅಥವಾ ಸ್ಥಳೀಯ ಸರ್ಕಾರಗಳಲ್ಲಿ ಸಮುದಾಯದ ಆದ್ಯತೆ, ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಪಕ್ಷವನ್ನು ಸ್ಥಾಪಿಸಿದ್ದರು. 

"ಅಸ್ತಿತ್ವದಲ್ಲಿರುವ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಮುದಾಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊರಗಿನಿಂದ ಕೆಲಸ ಮಾಡುತ್ತ   ಇದೆ. ಆದರೆ ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಮಗೆ ಯಾರಾದರೂ ಬೇಕು" ಎಂದು ಬಾಚು ಹೇಳಿದ್ದರು.

SCROLL FOR NEXT